ಪಾತ್ರೆಯಲ್ಲಿ ಮೊಟ್ಟೆ ವಾಸನೆಯಿದೆಯೇ? ಹಾಗಿದ್ದರೆ ಅದನ್ನು ಹೋಗಲಾಡಿಸಲು ಹೀಗೆ ಮಾಡಿ

ಭಾನುವಾರ, 11 ನವೆಂಬರ್ 2018 (09:50 IST)
ಬೆಂಗಳೂರು: ಮೊಟ್ಟೆ ಹಾಕಿ ಬೇಯಿಸಿ ಪಾತ್ರೆಯ ವಾಸನೆ ಸಾಮಾನ್ಯ ಸೋಪ್ ಬಳಸಿ ತೊಳೆಯುವುದರಿಂದ ಹೋಗದು. ಅದನ್ನು ಹೋಗಲಾಡಿಸಲು ಈ ಟ್ರಿಕ್ಸ್ ಮಾಡಿ ನೋಡಿ.

ನಿಂಬೆ ಹಣ್ಣು
ಮೊಟ್ಟೆ ಬೇಯಿಸಿದ ಪಾತ್ರೆಯನ್ನು ನಿಂಬೆ ಹಣ್ಣು ಅಥವಾ ರಸ ಬಳಸಿ ಚೆನ್ನಾಗಿ ತೊಳೆಯಿರಿ. ಇದರಿಂದ ವಾಸನೆ ಹೋಗುವುದು.

ಕಡಲೆ ಹಿಟ್ಟು
ಪಾತ್ರೆಗೆ ಕಡಲೆ ಹಿಟ್ಟು ಹಾಕಿ ಹತ್ತು ನಿಮಿಷ ಹಾಗೇ ಬಿಡಿ. ಬಳಿಕ ಮಾಮೂಲಾಗಿ ಪಾತ್ರೆ ತೊಳೆದುಕೊಳ್ಳುವಂತೆ ತೊಳೆದುಕೊಳ್ಳಿ.

ಕಾಫಿ ಪೌಡರ್
ಇದಂತೂ ಎಲ್ಲರ ಮನೆಯಲ್ಲಿ ಇದ್ದೇ ಇರುತ್ತದೆ. ಮೊಟ್ಟೆ ಹಾಕಿದ ಪಾತ್ರೆಗೆ ಸ್ವಲ್ಪ ಕಾಫಿ ಪೌಡರ್ ಹಾಕಿ ಉಜ್ಜಿಕೊಳ್ಳಿ. ಸ್ವಲ್ಪ ಹೊತ್ತು ಬಿಟ್ಟು ಪಾತ್ರೆ ತೊಳೆದುಕೊಳ್ಳಿ.

ವಿನೇಗರ್
ವಿನೇಗರ್ ದ್ರಾವಣ ಹಚ್ಚಿ ಸ್ವಲ್ಪ ಹೊತ್ತು ವಾಸನೆ ಬರುವ ಪಾತ್ರೆಯನ್ನು ಬಿಡಿ. ನಂತರ ಮಾಮೂಲಾಗಿ ತೊಳೆದುಕೊಂಡರೂ ವಾಸನೆ ಮಾಯವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ