ಮುಟ್ಟಿನ ಸಮಯದಲ್ಲಿ ನೋವು ಕಾಣಿಸಿಕೊಳ್ಳಲು ಈ ಅಭ್ಯಾಸಗಳೇ ಕಾರಣ

ಮಂಗಳವಾರ, 23 ಜನವರಿ 2018 (07:29 IST)
ಬೆಂಗಳೂರು : ಮುಟ್ಟು ಒಂದು ನೈಸರ್ಗಿಕ ಕ್ರಿಯೆ. ಮಹಿಳೆಯಾದವಳು ಪ್ರತಿ ತಿಂಗಳು ಮೂರ್ನಾಲ್ಕು ದಿನ ಯಮ ಯಾತನೆ ಅನುಭವಿಸಲೇಬೇಕು. ಕೆಲವರು ಮುಟ್ಟಿನ ಸಮಯದಲ್ಲಿ ಕಾಲು-ಸೊಂಟ ನೋವು, ರಕ್ತಸ್ರಾವ, ಮಾನಸಿಕ ಕಿರಿಕಿರಿಗಳಿಂದ ಬಳಲುತ್ತಿರುತ್ತಾರೆ. ಮುಟ್ಟಿನ ನೋವು ಹೆಚ್ಚಾಗಲು ನಮ್ಮ ಜೀವನ ಶೈಲಿ ಕೂಡ ಕಾರಣ. ನಾವು ತಿನ್ನುವ ಆಹಾರ ಹಾಗು ಜೀವನಾಭ್ಯಾಸಗಳು ಮುಟ್ಟಿನ ನೋವನ್ನು ಹೆಚ್ಚು ಮಾಡುತ್ತದೆ.


ದೇಹದಲ್ಲಿ ಹಾರ್ಮೋನುಗಳ ಸಮತೋಲನಕ್ಕೆ ನಿದ್ರೆ ಬೇಕೆಬೇಕು. ಅಗತ್ಯವಿರುವಷ್ಟು ನಿದ್ರೆ ದೇಹಕ್ಕೆ ಸಿಕ್ಕಿಲ್ಲವೆಂದಾದ್ರೆ ಮುಟ್ಟಿನ ಅವಧಿಯಲ್ಲಿ ನೋವು ಉಂಟಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಕುಡಿಯುವುದರಿಂದ ಅದರಲ್ಲಿರುವ ಕೆಫೆನ್ ನಿಂದಾಗಿ ಮುಟ್ಟಿನ ಸಮಯದಲ್ಲಿ ಹೊಟ್ಟೆನೋವು ಕಾಣಿಸುತ್ತದೆ. ಏಕೆಂದರೆ ಆಗಾಗ ಮೂತ್ರವಿಸರ್ಜನೆಗೆ ಹೋಗಬೇಕಾಗುತ್ತದೆ. ಇದು ರಕ್ತನಾಳ ಕಿರಿದಾಗಿ ನೋವು ಹೆಚ್ಚಾಗಲು ಕಾರಣವಾಗುತ್ತದೆ.


ಧೂಮಪಾನ ಹಾಗು ಮಧ್ಯಪಾನ ಆರೋಗ್ಯವನ್ನು ಹಾಳುಮಾಡುವುದರ ಜೊತೆಗೆ ಮುಟ್ಟಿನ ಮೇಲೂ ಪ್ರಭಾವ ಬೀರುತ್ತದೆ ಎಂದು ಅನೇಕ ಅಧ್ಯಯನಗಳಿಂದ ತಿಳಿದುಬಂದಿದೆ. ಇವುಗಳ ಸೇವನೆಯಿಂದ ಮುಟ್ಟಿನ ಸಮಯ ನೋವು ಉಂಟಾಗುತ್ತದೆ. ಸಕ್ಕರೆ ಹಾಗು ಉಪ್ಪನ್ನು ಅಧಿಕವಾಗಿ ಸೇವಿಸುವುದರಿಂದ ಮುಟ್ಟಿನ ನೋವನ್ನು ಹೆಚ್ಚು ಮಾಡುವುದರಿಂದ ಆ ಸಮಯದಲ್ಲಿ ಸಕ್ಕರೆ ಮತ್ತು ಉಪ್ಪುನಿಂದ ದೂರವಿರಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ