ತುಳಸಿ ಎಲೆಯಲ್ಲಿ ಹೀಗೆ ಮಾಡುವುದರಿಂದ ಮಧುಮೇಹ ದೂರ!

ಗುರುವಾರ, 25 ಅಕ್ಟೋಬರ್ 2018 (09:14 IST)
ಬೆಂಗಳೂರು: ತುಳಸಿ ಎಲೆ ಶೀತ ಸಂಬಂಧೀ ರೋಗಗಳಿಗೆ ಪರಿಣಾಮಕಾರಿ ಮನೆ ಔಷಧ ಎನ್ನುವುದು ನಮಗೆಲ್ಲರಿಗೂ ಗೊತ್ತು. ಆದರೆ ಮಧುಮೇಹಕ್ಕೂ ತುಳಸಿ ಎಲೆ ಉತ್ತಮ ಗೊತ್ತಾ?

ತುಳಸಿಯಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿದ್ದು, ಇದರಲ್ಲಿ ರಕ್ತದಲ್ಲಿ ಗ್ಲುಕೋಸ್ ಅಂಶ ಕಡಿಮೆ ಮಾಡುವ ಗುಣವೂ ಇದೆಯಂತೆ. ಇದೇ ಕಾರಣಕ್ಕೆ ಪ್ರತಿನಿತ್ಯ ತುಳಸಿ ಎಲೆಯ ನೀರು ಸೇವಿಸುವುದರಿಂದ ಮಧುಮೇಹ ದೂರಮಾಡಬಹುದು ಎನ್ನುತ್ತದೆ ಆಯುರ್ವೇದ.

ಇದಕ್ಕೆ ಮಾಡಬೇಕಿರುವುದು ಇಷ್ಟೇ. ರಾತ್ರಿ ಮಲಗುವ ಮೊದಲು ಶುದ್ಧವಾದ ತುಳಸಿ ಎಲೆಗಳನ್ನು ನೀರಲ್ಲಿ ನೆನೆ ಹಾಕಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಸೇವಿಸಿ. ಇದರಿಂದ ಮಧುಮೇಹದ ಜತೆಗೆ ಶೀತ ಸಂಬಂಧೀ ಸಮಸ್ಯೆಯೂ ದೂರವಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ