ರಂಗಿನ ಹಬ್ಬದಲ್ಲಿ ಕಲ್ಯಾಣೋತ್ಸವ, ರಥೋತ್ಸವ ಸಂಭ್ರಮ

ಸೋಮವಾರ, 9 ಮಾರ್ಚ್ 2020 (18:37 IST)
ಹೋಳಿ ಹುಣ್ಣಿಮೆ ಹಬ್ಬವನ್ನು ರಾಜ್ಯದ ಹಲವೆಡೆ ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಅತ್ಯಂತ ಶ್ರದ್ದಾಭಕ್ತಿ ಹಾಗೂ ಸಡಗರ ಮತ್ತು ಸಂಭ್ರಮಗಳಿಂದ ಆಚರಿಸಲಾಯಿತು.

ಹೋಳಿಹುಣ್ಣಿಮೆ ಪ್ರಯುಕ್ತ ಚಿಕ್ಕಬಳ್ಳಾಪುರ ತಾಲೂಕು ಬಾರ್ಲಹಳ್ಳಿ ಯ  ಶ್ರೀಯೋಗ ಜಾಲಾರಿ ಲಕ್ಷ್ಮಿನರಸಿಂಹ ದೇವಾಲಯದಲ್ಲಿ ಕಲ್ಯಾಣೋತ್ಸವ ಮತ್ತು ರಥೋತ್ಸವ ನಡೆಯಿತು.  ವಿವಿಧೆಡೆಗಳಿಂದ ಆಗಮಿಸಿದ ನೂರಾರು ಭಕ್ತರು ದೇವರ ದರ್ಶನ ಪಡೆದರು. ಇದೇ ವೇಳೆ ಚಿಕ್ಕಬಳ್ಳಾಪುರದಿಂದ ಬಾರ್ಲಹಳ್ಳಿವರೆಗೆ ಭಕ್ತಾದಿಗಳು ಉಚಿತ ಬಸ್ ವ್ಯವಸ್ಥೆ  ಮಾಡಿದ್ದರು.

ಅನ್ನ ಸಂತರ್ಪಣೆಯೂ ನಡೆಯಿತು. ಬಾಗೇಪಲ್ಲಿ ತಾಲೂಕು ಮಿಟ್ಟೇಮರಿ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದಲ್ಲಿ ಬ್ರಹ್ಮ ರಥೋತ್ಸವ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಚಿಕ್ಕಬಳ್ಳಾಪುರ ನಗರದ ದೊಡ್ಡಭಜನೆ ಮನೆ ರಸ್ತೆಯ ಕನಕ  ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದಲ್ಲಿ ಕಲ್ಯಾಣೋತ್ಸವ ನಡೆಯಿತು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ