ಕೊರೊನಾ ವೈರಸ್ ನಿಂದ ಮಗಳನ್ನು ರಕ್ಷಿಸಲು ಚೀನೀ ತಾಯಿ ಮಾಡಿದ್ದೇನು ಗೊತ್ತಾ?

ಗುರುವಾರ, 27 ಫೆಬ್ರವರಿ 2020 (11:21 IST)
ಚೀನಾ: ಚೀನಾದಲ್ಲಿ ಮಹಾಮಾರಿ ಕೊರೊನಾ ವೈರಸ್ ಗೆ ಹೆದರಿದ ಜನರು ಅದರಿಂದ ತಪ್ಪಿಸಿಕೊಳ್ಳಲು ಹಲವಾರು ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಅದೇರೀತಿ ಇದೀಗ ಚೀನೀ ತಾಯಿಯೊಬ್ಬಳು ತನ್ನ ಮಗಳನ್ನು ಕೊರೊನಾ ವೈರಸ್ ನಿಂದ ರಕ್ಷಿಸಲು ಹೊಸ ವಿಧಾನವೊಂದನ್ನು ಕಂಡುಹಿಡಿದಿದ್ದಾಳೆ.


ಹೌದು, ಹುಬೈ ಪ್ರಾಂತ್ಯದಲ್ಲಿ ತಾಯಿಯೊಬ್ಬಳು ಬಿದಿರಿನ ಪಟ್ಟಿಗಳು ಮತ್ತು ಪ್ಲಾಸ್ಟಿಕ್ ಹಾಳೆಗಳನ್ನು ಬಳಸಿ ಕೊರೊನಾ ವೈರಸ್ ವಿರೋಧಿ ಟೆಂಟ್ ನ್ನು ನಿರ್ಮಿಸಿದ್ದಾಳೆ. ಕೊರೊನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಅಲ್ಲಿನ ಶಾಲೆಗಳನ್ನು ಬಂದ್ ಮಾಡಲಾಗಿದೆ. ಆದಕಾರಣ ಆಕೆಯ ಮಗಳು ಆನ್ ಲೈನ್ ಮೂಲಕ ಅಧ್ಯಯನ ಮಾಡುತ್ತಿದ್ದಾಳೆ.


ಮನೆಯ ಒಳಗಡೆ ನೆಟ್ ವರ್ಕ್ ಸಿಗದ ಕಾರಣ ಮನೆಯ ಹೊರಗಡೆ ಈ ಟೆಂಟ್ ನಿರ್ಮಿಸಿ ಮಗಳ ಅಧ್ಯಯನಕ್ಕೆ ಅನುಕೂಲವಾಗುವಂತೆ ಮಾಡಿಕೊಟ್ಟಿದ್ದಾಳೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು, ತಾಯಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ