ಪಾಕಿಸ್ತಾನದಲ್ಲಿ ಚುನಾವಣೆಗೆ ನಿಂತ ಹಿಂದೂ ಮಹಿಳೆ

ಮಂಗಳವಾರ, 26 ಡಿಸೆಂಬರ್ 2023 (11:10 IST)
ಇಸ್ಲಾಮಾಬಾದ್: ಪಕ್ಕಾ ಮುಸ್ಲಿಂ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯೊಬ್ಬರು ಚುನಾವಣೆಗೆ ಸ್ಪರ್ಧಿಸಿ ದಿಟ್ಟತನ ಮೆರೆದಿದ್ದಾರೆ.

ಪಾಕಿಸ್ತಾನದಲ್ಲಿ ಮುಂದಿನ ವರ್ಷ ಫೆಬ್ರವರಿ 8 ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಖೈಬರ್ ಪಖ್ತುಂಖ್ವಾಬಾದ ಬುನೇರ್ ಜಿಲ್ಲೆಯಲ್ಲಿ ಸ್ಪರ್ಧಿಸಲು ಹಿಂದೂ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ.

ಸವೇರಾ ಪ್ರಕಾಶ್ ಎಂಬ ಮಹಿಳೆ ಈ ದಿಟ್ಟತನ ತೋರಿದ್ದಾಳೆ. ಇದೇ ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ಚುನಾವಣೆಗೆ ಸ್ಪರ್ಧಿಸುವ ಧೈರ್ಯ ಮಾಡುತ್ತಿದ್ದಾರೆ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯಿಂದ ಸವೇರಾ ಸ್ಪರ್ಧೆ ನಡೆಸಲಿದ್ದಾರೆ.

ಸವೇರಾ ತಂದೆ ಕೂಡಾ ಪಿಪಿಪಿ ಪಕ್ಷದ ಸದಸ್ಯರಾಗಿ ಈಗ ನಿವೃತ್ತಿ ಹೊಂದಿದ್ದಾರೆ. ಇದೀಗ ತಂದೆಯ ಹಾದಿಯಲ್ಲೇ ನಡೆಯಲು ಮಗಳು ತೀರ್ಮಾನಿಸಿದ್ದಾಳೆ. ವೈದ್ಯ ಪದವಿ ಪಡೆದಿರುವ ಸವೇರಾ ಪೀಪಲ್ಸ್ ಪಾರ್ಟಿಯ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ