ಪುಟಿನ್ ಭೇಟಿ ಮಾಡಲು ರಷ್ಯಾಗೆ ತೆರಳಿದ ಕಿಮ್ ಜಾಂಗ್ ಉನ್

ಮಂಗಳವಾರ, 12 ಸೆಪ್ಟಂಬರ್ 2023 (11:10 IST)
ಮಾಸ್ಕೋ : ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಮಂಗಳವಾರ ತಮ್ಮ ಖಾಸಗಿ ರೈಲಿನ ಮುಖಾಂತರ ರಷ್ಯಾಗೆ ತೆರಳಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕಿಮ್ ಭಾನುವಾರ ತನ್ನ ಖಾಸಗಿ ರೈಲಿನಲ್ಲಿ ಪ್ಯೋಂಗ್ಯಾಂಗ್ನಿಂದ ರಷ್ಯಾಗೆ ಪ್ರಯಾಣ ಬೆಳೆಸಿದ್ದಾರೆ. ಉನ್ನತ ಶಸ್ತ್ರಾಸ್ತ್ರ, ಮಿಲಿಟರಿ ಅಧಿಕಾರಿಗಳು ಹಾಗೂ ವಿದೇಶಾಂಗ ಸಚಿವರೊಂದಿಗೆ ಅವರು ರಷ್ಯಾ ತಲುಪಿದ್ದಾರೆ.

ರಷ್ಯಾದ ಮಾಧ್ಯಮ ವರದಿಗಳ ಪ್ರಕಾರ ಕಿಮ್ ಈ ವಾರದ ಕೊನೆಯಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಲಿದ್ದಾರೆ. ಪುಟಿನ್ ಅವರೊಂದಿಗೆ ಸಮಗ್ರ ಚರ್ಚೆಗಾಗಿ ಕಿಮ್ ರಷ್ಯಾಗೆ ಭೇಟಿ ನೀಡಿದ್ದಾರೆ.

ಉಭಯ ನಾಯಕರು ದ್ವಿಪಕ್ಷೀಯ ಸಂಬಂಧ, ಪ್ರದೇಶದ ಪರಿಸ್ಥಿತಿ ಮತ್ತು ಜಾಗತಿಕ ರಂಗದಲ್ಲಿ ಚರ್ಚಿಸಲಿದ್ದಾರೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಎರಡು ನಿಯೋಗಗಳ ನಡುವೆ ಮಾತುಕತೆ ನಡೆಯಲಿದ್ದು, ಅದರ ನಂತರ ಅಗತ್ಯವಿದ್ದರೆ ನಾಯಕರು ಸಂವಹನ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ