ನೇಪಾಳ ಈಗ ಚೀನಾದ ಕೈಗೊಂಬೆ? ಭಾರತದ ವಿರುದ್ಧ ಕತ್ತಿಮಸೆಯುತ್ತಿರುವ ನೆರೆ ರಾಷ್ಟ್ರಗಳು

ಶುಕ್ರವಾರ, 22 ಮೇ 2020 (09:14 IST)
ನವದೆಹಲಿ: ಒಂದು ಕಾಲದಲ್ಲಿ ಭಾರತದ ಮಿತ್ರ ರಾಷ್ಟ್ರವಾಗಿದ್ದ ನೇಪಾಳ ಈಗ ಸದ್ದಿಲ್ಲದೇ ಭಾರತದ ವಿರುದ್ಧ ಕತ್ತಿ ಮಸೆಯುತ್ತಿದೆ. ಇದಕ್ಕೆ ನಿನ್ನೆ ನೇಪಾಳ ಪ್ರಧಾನಿ ಕೆ.ಪಿ. ಒಲಿ ಕೊರೋನಾ ಹರಡುವಿಕೆ ಬಗ್ಗೆ ನೀಡಿದ ಹೇಳಿಕೆಯೇ ಸಾಕ್ಷಿ.

 
ಚೀನಾಕ್ಕಿಂತಲೂ ಭಾರತದಿಂದಲೇ ತಮ್ಮ ರಾಷ್ಟ್ರಕ್ಕೆ ಹೆಚ್ಚು ಕೊರೋನಾ ಸೋಂಕಿನ ಅಪಾಯವಿದೆ ಎಂದು ನೇಪಾಳ ಪ್ರಧಾನಿ ಹೇಳಿಕೆ ನೀಡಿದ್ದರು. ಈ ಮೂಲಕ ಭಾರತದ ವಿರುದ್ಧ ಆ ದೇಶ ಈಗ ಹೊಂದಿರುವ ನಿಲುವಿಗೆ ಸಾಕ್ಷಿ.

ಇದಕ್ಕೂ ಮೊದಲು ಭಾರತದ ಭಾಗವಾಗಿರುವ ಮೂರು ಗ್ರಾಮಗಳನ್ನು ತನ್ನದೆಂದು ಹೇಳಿಕೊಂಡಿದ್ದ ನೇಪಾಳ ಅಲ್ಲಿ ಭಾರತ ರಸ್ತೆ, ಕಟ್ಟಡ ನಿರ್ಮಿಸುವ ಮೂಲಕ ಅಕ್ರಮವಾಗಿ ತನ್ನ ಭೂಭಾಗವನ್ನು ಒಳ ಹಾಕಿಕೊಂಡಿದೆ ಎಂದು ಆರೋಪಿಸಿತ್ತು. ಇದಕ್ಕೆಲ್ಲಾ ತೆರೆ ಮರೆಯಲ್ಲೇ ಚೀನಾ ಕುಮ್ಮಕ್ಕೂ ಇದೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಚೀನಾ ಕೂಡಾ ಗಡಿಯಲ್ಲಿ ಸೇನೆಯ ಮೂಲಕ ಕಿರಿ ಕಿರಿ ಮಾಡುತ್ತಿದೆ. ಒಟ್ಟಾರೆ ಭಾರತಕ್ಕೆ ಈಗ ಕೊರೋನಾ ನಡುವೆ ಹೊಸ ತಲೆ ನೋವು ಶುರುವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ