ಮೆಕ್ಸಿಕೊದಲ್ಲಿ ಬಿದ್ದ ಆಲಿಕಲ್ಲು ನೋಡಿ ಜನ ಬೆಚ್ಚಿಬಿದ್ದಿದ್ದೇಕೆ?

ಶುಕ್ರವಾರ, 22 ಮೇ 2020 (08:33 IST)
Normal 0 false false false EN-US X-NONE X-NONE

ಮೆಕ್ಸಿಕೊ :  ಮೆಕ್ಸಿಕೊದಲ್ಲಿ ಆಲಿಕಲ್ಲು ಮಳೆ ಬಿದ್ದಿದ್ದು, ಅದನ್ನು ಕಂಡು ಅಲ್ಲಿನ ಜನರು ಬೆಚ್ಚಿಬಿದ್ದಿದ್ದಾರೆ.

 

ಹೌದು. ಇದಕ್ಕೆ ಕಾರಣವೇನೆಂದರೆ ಈಗಾಗಲೇ ಕೊರೊನಾ ವೈರಸ್ ನಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಆದರೆ ಈಗ  ಮೆಕ್ಸಿಕೊದಲ್ಲಿ ಬಿದ್ದ ಆಲಿಕಲ್ಲು  ಕೊರೊನಾ ವೈರಸ್ ಮಾದರಿಯಲ್ಲೇ ಇದೆ. ಇದನ್ನು ಕಂಡು ಜನರು ಹೌಹಾರಿದ್ದಾರೆ. 

 

ಈ ಫೋಟೊ ಸಖತ್ ವೈರಲ್ ಆಗಿದ್ದು, ಇದು ಕೊರೊನಾ ವೈರಸ್ ಬಗ್ಗೆ ದೇವರು ಕಳುಹಿಸಿದ  ಸಂದೇಶ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಆದರೆ ಬಿರುಗಾಳಿಯ ಒತ್ತಡಕ್ಕೆ ಈ ಆಕಾರಕ್ಕೆ ಬಂದಿರಬಹುದು. ಯಾರು ಭಯಪಡುವ ಅಗತ್ಯವಿಲ್ಲ  ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ