ಸೂಟ್ ಕೇಸ್ ಒಳಗೆ ಉಸಿರುಗಟ್ಟಿಸಿ ಬಾಯ್ ಫ್ರೆಂಡ್ ಸಾಯಿಸಿದ ಮಹಿಳೆ

ಶುಕ್ರವಾರ, 28 ಫೆಬ್ರವರಿ 2020 (10:03 IST)
ಫ್ಲೋರಿಡಾ: ತನ್ನ ಪ್ರಿಯಕರನನ್ನು ಸೂಟ್ ಕೇಸ್ ಒಳಗೆ ಉಸಿರುಗಟ್ಟಿಸಿ ಕೊಂದ ಮಹಿಳೆ ಬಳಿಕ ತಾವಿಬ್ಬರೂ ಕಣ್ಣಾಮುಚ್ಚಾಲೆ ಆಡುವಾಗ ಈ ಅನಾಹುತವಾಯಿತು ಎಂದು ನಾಟಕ ಮಾಡಿದ ಘಟನೆ ಫ್ಲೋರಿಡಾದಲ್ಲಿ ನಡೆದಿದೆ.


ಈ ಸಂಬಂಧ 42 ವರ್ಷದ ಸಾರಾ ಬೂನ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಈಕೆ ಬಾಯ್ ಫ್ರೆಂಡ್ ನನ್ನು ಸೂಟ್ ಕೇಸ್ ಒಳಗೆ ತೂರಿ ಜಿಪ್ ಹಾಕಿ ಲಾಕ್ ಮಾಡಿದ್ದಳು. ಆತ ಸಹಾಯಕ್ಕಾಗಿ ಎಷ್ಟೇ ಕೂಗಾಡಿದರೂ ಜಿಪ್ ಓಪನ್ ಮಾಡದೇ ಉಸಿರುಗಟ್ಟಿಸಿ ಸಾಯಿಸಿದ್ದಳು.

ಆದರೆ ನಾವಿಬ್ಬರೂ ಡ್ರಿಂಕ್ಸ್ ಮಾಡುತ್ತಿದ್ದೆವು. ಅದಾದ ಬಳಿಕ ಕಣ್ಣಾಮುಚ್ಚಾಲೆ ಆಡೋಣ ಎಂದೆವು. ಈ ಸಂದರ್ಭದಲ್ಲಿ ಅಕಸ್ಮಾತ್ತಾಗಿ ಹೀಗಾಯಿತು ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ