ವಿರಾಟ್-ಅನುಷ್ಕಾ ಮಗುವಿಗೆ ಎಬಿಡಿ ವಿಲಿಯರ್ಸ್ ಮಾವ!

ಸೋಮವಾರ, 19 ಅಕ್ಟೋಬರ್ 2020 (11:23 IST)
ದುಬೈ: ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಕ್ರಿಕೆಟ್ ನಲ್ಲಿ ಎಂಥಾ ಸ್ನೇಹಿತರು ಎಂಬುದು ಎಲ್ಲರಿಗೂ ಗೊತ್ತು. ಇಬ್ಬರೂ ಕ್ರಿಕೆಟ್ ಹೊರತಾಗಿಯೂ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ ಎಂಬುದಕ್ಕೆ ವಿರಾಟ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿರುವ ಫೋಟೋ ಸಾಕ್ಷಿ.


ಅನುಷ್ಕಾ ಜತೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಸನ್ ಸೆಟ್ ಹಿನ್ನಲೆಯಲ್ಲಿರುವ ಅದ್ಭುತ ಕ್ಷಣದ ಫೋಟೋವನ್ನು ವಿರಾಟ್ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು. ಜತೆಗೆ ಈ ಅದ್ಭುತ ಫೋಟೋ ಸೆರೆಹಿಡಿದವರು ಎಬಿಡಿ ಎಂದು ಕ್ರೆಡಿಟ್ ಕೂಡಾ ಕೊಟ್ಟಿದ್ದಾರೆ.

ಇದನ್ನು ನೋಡಿ ಪ್ರತಿಕ್ರಿಯಿಸಿರುವ ನೆಟ್ಟಿಗರು ನಿಮ್ಮ ಸ್ನೇಹ ಕ್ರಿಕೆಟ್ ಗೂ ಮೀರಿದ್ದು, ಇಬ್ಬರ ಜತೆಯಾಟ ಮೈದಾನದಿಂದ ಹೊರಗೂ ನಡೆಯುತ್ತಿದೆ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ನಿಮ್ಮಿಬ್ಬರ ಮಗುವಿಗೆ ಎಬಿಡಿಯೇ ಮಾವ ಎಂದು ಕಿಚಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ