ಮುಂಬೈ ಇಂಡಿಯನ್ಸ್, ಕೆಕೆಆರ್ ಗೆ ಮಾತ್ರ ಹೆಚ್ಚುವರಿ ಕ್ವಾರಂಟೈನ್ ಯಾಕೆ?

ಶನಿವಾರ, 29 ಆಗಸ್ಟ್ 2020 (09:24 IST)
ದುಬೈ: ಐಪಿಎಲ್ 13 ಆಡಲು ಅರಬರ ರಾಷ್ಟ್ರಕ್ಕೆ ತೆರಳಿರುವ ಫ್ರಾಂಚೈಸಿಗಳ ಪೈಕಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕೊತ್ತಾ ನೈಡರ್ಸ್ ತಂಡ ಮಾತ್ರ ಕ್ವಾರಂಟೈನ್ ಯಾವಾಗ ಮುಗಿಯುತ್ತದೋ ಎಂದು ಕಾಯುತ್ತಾ ಕೂತಿದೆ.


ಉಳಿದ ತಂಡಗಳು ಈಗಾಗಲೇ ಕ್ವಾರಂಟೈನ್ ಅವಧಿ ಮುಗಿಸಿ ನೆಟ್ ಪ್ರಾಕ್ಟೀಸ್ ಗೆ ಮರಳುತ್ತಿವೆ. ಆದರೆ ಇವೆರಡು ತಂಡಗಳು ಮಾತ್ರ ಇನ್ನೂ ಕ್ವಾರಂಟೈನ್ ಅವಧಿಯನ್ನು ಹೆಚ್ಚುವರಿಯಾಗಿ ಇನ್ನೂ ಏಳು ದಿನ ಹೋಟೆಲ್ ಕೊಠಡಿಯಲ್ಲೇ ಕಾಲ ಕಳೆಯಬೇಕಾಗಿದೆ.

ಇದಕ್ಕೆ ಕಾರಣ ಇವೆರಡೂ ತಂಡಗಳು ಭಾರತದಿಂದ ನೇರವಾಗಿ ಅಬುದಾಬಿಗೆ ಬಂದಿಳಿದಿವೆ. ಇಲ್ಲಿನ ನಿಯಮದ ಪ್ರಕಾರ ವಿದೇಶದಿಂದ ಬಂದವರು ಕಡ್ಡಾಯವಾಗಿ 14 ದಿನ ಕ್ವಾರಂಟೈನ್ ಗೊಳಗಾಬೇಕು. ಹೀಗಾಗಿ ನಿಯಮದ ಪ್ರಕಾರ ಈ ಎರಡೂ ತಂಡಗಳು ಮುಂದಿನ ವಾರದಿಂದಷ್ಟೇ ಅಭ್ಯಾಸಕ್ಕಿಳಿಯಬೇಕಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ