ಐಪಿಎಲ್ ಪ್ರಾಯೋಜಕತ್ವಕ್ಕೆ ಪತಂಜಲಿ ಬಿಡ್ಡಿಂಗ್!

ಸೋಮವಾರ, 10 ಆಗಸ್ಟ್ 2020 (16:45 IST)
ಮುಂಬೈ: ಚೀನಾ ಮೂಲದ ವಿವೋ ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದ ಬೆನ್ನಲ್ಲೇ ಬಿಸಿಸಿಐ ಹೊಸ ಪ್ರಾಯೋಜಕರ ಹುಡುಕಾಟದಲ್ಲಿದೆ. ಇದೀಗ ಪಕ್ಕಾ ದೇಸೀಯ ಕಂಪನಿ ಪತಂಜಲಿ ಐಪಿಎಲ್ 13 ರ ಟೈಟಲ್ ಪ್ರಾಯೋಜಕತ್ವಕ್ಕೆ ಬಿಡ್ಡಿಂಗ್ ಮಾಡಲು ತೀರ್ಮಾನಿಸಿದೆ.

 

ನಮ್ಮ ಮಾರುಕಟ್ಟೆಯನ್ನು ವಿದೇಶಗಳಲ್ಲೂ ವಿಸ್ತರಿಸಲು ಬಯಸುತ್ತೇವೆ. ಈ ಕಾರಣಕ್ಕೆ ಐಪಿಎಲ್ ಬಿಡ್ಡಿಂಗ್ ಸಲ್ಲಿಸಲಿದ್ದೇವೆ ಎಂದು ಪತಂಜಲಿ ಹೇಳಿಕೊಂಡಿದೆ.

ಈ ಸುದ್ದಿ ಹೊರಬೀಳುತ್ತಿದ್ದಂತೇ ಟ್ವಿಟರಿಗರು ಉತ್ಸಾಹದಿಂದ ಟ್ವೀಟ್ ಮಾಡುತ್ತಿದ್ದು, ವಿವಿಧ ಮೆಮೆಗಳ ಮೂಲಕ ತಮ್ಮ ಅಭಿಪ್ರಾಯ ಹೊರ ಹಾಕುತ್ತಿದ್ದಾರೆ. ಜತೆಗೆ ಇದುವರೆಗೆ ಚೀನೀ ಐಪಿಎಲ್ ಎಂದು ಜರೆಯುತ್ತಿದ್ದ ಅಭಿಮಾನಿಗಳು ಈಗ ಪತಂಜಲಿ ಐಪಿಎಲ್ ಎಂದು ಟ್ರೋಲ್ ಮಾಡುತ್ತಿದ್ದಾರೆ. ಆದರೆ ಪತಂಜಲಿ ಇನ್ನೂ ಬಿಡ್ಡಿಂಗ್ ಸಲ್ಲಿಸಿಲ್ಲ. ಒಂದು ವೇಳೆ ಸಲ್ಲಿಸಿದರೂ ಬೇರೆ ದೈತ್ಯ ಕಂಪನಿಗಳ ಪೈಪೋಟಿಯಲ್ಲಿ ಜಯ ಗಳಿಸುತ್ತಾ ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ