ಮತ್ತೇ ಎಡವಿದ ಆರ್‌ಸಿಬಿ: ಮುಂಬೈ ಇಂಡಿಯನ್ಸ್‌ಗೆ 7 ವಿಕೆಟ್‌ಗಳ ಸುಲಭ ಜಯ

Sampriya

ಗುರುವಾರ, 11 ಏಪ್ರಿಲ್ 2024 (23:30 IST)
Photo Courtesy X
ಮುಂಬೈ: ಇಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ವಿರುದ್ಧ ಪಂದ್ಯಾಟದಲ್ಲಿ ಮುಂಬೈ ಇಂಡಿಯನ್ಸ್‌ 7 ವಿಕೆಟ್‌ಗಳ ಅಮೋಘ ಜಯವನ್ನು ಪಡೆಯಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದ ಮುಂಬೈ ಇಂಡಿಯನ್ಸ್‌ ತಂಡ ಆರ್‌ಸಿಬಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.

ನಿಗದಿತ 20ಓವರ್‌ಗಳಲ್ಲಿ ಆರ್‌ಸಿಬಿ 8 ವಿಕೆಟ್ ಕಷ್ಟಕ್ಕೆ 196ರನ್ ಗಳಿಸಿತು.  197 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ  ಮುಂಬೈ ಇಂಡಿಯನ್ಸ್ 7 ವಿಕೆಟ್‌ಗಳ ಜಯವನ್ನು ಸಾಧಿಸಿತು. ಈ ಮೂಲಕ ಆಡಿದ ಇಷ್ಟು ಪಂದ್ಯಗಳಲ್ಲಿ 2ರಲ್ಲಿ ಗೆಲುವನ್ನು ಸಾಧಿಸಿ ಹೊಸ ಹುರುಪಿನಲ್ಲಿ ಗೆಲುವಿನ ನಗೆ ಚೆಲ್ಲಿದೆ.

ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್‌ ತಂಡಕ್ಕೆ ನೋವಿನ ಮೇಲೆ ಮತ್ತೆ ಬರೆ ಎಳೆದಂತಾಗಿದೆ.

ಐಪಿಎಲ್ 2024ರ 17ನೇ ಸೀಸನ್‌ನ 25ನೇ ಪಂದ್ಯವು ಉಭಯ ತಂಡಗಳಿಗೆ ತುಂಬಾನೇ ಮಹತ್ವದ್ದಾಗಿದೆ.  ಈ ಎರಡೂ ತಂಡಗಳು ತಲಾ 2 ಪಾಯಿಂಟ್‌ಗಳೊಂದಿಗೆ ಅಂಕಪಟ್ಟಿಯಲ್ಲಿ 8 ಮತ್ತು 9ನೇ ಸ್ಥಾನದಲ್ಲಿದೆ.  ಈ ಬಾರಿಯಾ ಟೂರ್ನಿಯಲ್ಲಿ ಒಟ್ಟು ಐದು ಪಂದ್ಯಗಳನ್ನು ಆಡಿರುವ ಆರ್‌ಸಿಬಿ ತಂಡವು ನಾಲ್ಕರಲ್ಲಿ ಸೋತಿದೆ.

ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ತಂಡ ಹಾಗೂ ಆರ್‌ಸಿಬಿ ತಂಡವೂ ಫಾಫ್ ಡುಪ್ಲೇಸಿಸ್ ನಾಯಕತ್ವದಲ್ಲಿ ಪಂದ್ಯಾಟವಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ