ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆ

ಶನಿವಾರ, 25 ಏಪ್ರಿಲ್ 2020 (10:54 IST)

ನವದೆಹಲಿ : ಇಂದು ಚಿನ್ನದ ಬೆಲೆಯಲ್ಲಿ 79ರೂ. ಏರಿಕೆ ಕಂಡುಬಂದಿದ್ದು, 1 ಗ್ರಾಂ ಚಿನ್ನದ ಬೆಲೆ 4,450ರೂ.ಗಳಾಗಿದೆ. ಬೆಳ್ಳಿಯ ಬೆಲೆಯಲ್ಲಿಯೂ 11ಪೈಸೆ  ಏರಿಕೆ  ಕಂಡುಬಂದಿದ್ದು, 1 ಗ್ರಾಂ ಬೆಳ್ಳಿಯ ಬೆಲೆ 42.53 ರೂ ಆಗಿದೆ.

 

ಅದರಂತೆ ದೆಹಲಿಯಲ್ಲಿ 22 ಕ್ಯಾರೆಟ್  10ಗ್ರಾಂ ಚಿನ್ನದ ಬೆಲೆ 43,000ರೂ. ಹಾಗೂ 1 ಕೆಜಿ ಬೆಳ್ಳಿ ದರ 42,530ರೂ. ಆಗಿದೆ. ,ಹಾಗೇ ಮುಂಬೈ ನಲ್ಲಿ 22 ಕ್ಯಾರೆಟ್  10ಗ್ರಾಂ ಚಿನ್ನದ ಬೆಲೆ 44,500ರೂ ಹಾಗೂ 1 ಕೆಜಿ ಬೆಳ್ಳಿ ದರ 42,530ರೂ. ಆಗಿದೆ.

 

ಬೆಂಗಳೂರಿನಲ್ಲಿ 22 ಕ್ಯಾರೆಟ್  10ಗ್ರಾಂ ಚಿನ್ನದ ಬೆಲೆ 42,060ರೂ. ಹಾಗೂ 1 ಕೆಜಿ ಬೆಳ್ಳಿ ದರ 42,530ರೂ. ಆಗಿದ್ದರೆ ಕೊಲ್ಕತ್ತಾದಲ್ಲಿ  10ಗ್ರಾಂ ಚಿನ್ನದ ಬೆಲೆ 42,810ರೂ. ಹಾಗೂ 1 ಕೆಜಿ ಬೆಳ್ಳಿ ದರ 42,530ರೂ.ಆಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ