ಫೇಸ್‌ ಬುಕ್ ಖಾತೆ ಹೊಂದಿದವರು ಕೂಡಲೇ ನಿಮ್ಮ ಪಾಸ್ ವರ್ಡ್ ಚೇಂಜ್ ಮಾಡಿ. ಯಾಕೆ ಗೊತ್ತಾ?

ಭಾನುವಾರ, 24 ಮಾರ್ಚ್ 2019 (10:58 IST)
ಬೆಂಗಳೂರು : ಫೇಸ್‌ ಬುಕ್ ಬಳಸುತ್ತಿರುವ ಖಾತೆದಾರರು ತಮ್ಮ ಖಾತೆಗೆ 2 ಫ್ಯಾಕ್ಟರ್ ಪಾಸ್‌ ವರ್ಡ್ ಇಡುವಂತೆ ಸೈಬರ್ ಸೆಕ್ಯೂರಿಟಿ ತಜ್ಞರು ಸಲಹೆ ನೀಡಿದ್ದಾರೆ‌.

ಹೌದು, ಇತ್ತೀಚಿಗೆ ಬಿಡುಗಡೆಯಾಗಿರುವ ಸೈಬರ್ ವರದಿ ಪ್ರಕಾರ ಫೇಸ್‌ ಬುಕ್‌ನಲ್ಲಿರುವ 200-600 ಮಿಲಿಯನ್ ಫೇಸ್‌ ಬುಕ್‌ ‌ಖಾತೆಗಳು ಸರಳ ಪಾಸ್‌ ವರ್ಡ್‌ಗಳಿದ್ದು, ಇವುಗಳನ್ನು ಫೇಸ್‌ಬುಕ್‌ ನಲ್ಲಿ ಕಾರ್ಯನಿರ್ವಹಿಸುವ‌ 20 ಸಾವಿರ‌ ಸಿಬ್ಬಂದಿಗಳೇ ಹುಡುಕಬಹುದಾಗಿದೆ‌. ಆದ್ದರಿಂದ ನಿಮ್ಮ ಖಾತೆಯನ್ನು ಇನ್ನೊಬ್ಬರು ಕದ್ದು ನೋಡುವ ಸಾಧ್ಯತೆಯಿರುವುದರಿಂದ 2 ಫ್ಯಾಕ್ಟರ್ ಪಾಸ್‌ ವರ್ಡ್ ಇಡುವಂತೆ ಸೈಬರ್ ಸೆಕ್ಯೂರಿಟಿ ತಜ್ಞರು ಸಲಹೆ ನೀಡಿದ್ದಾರೆ‌.

 

ಆದರೆ ಇದೀಗ ಈ ಬಗ್ಗೆ ಫೇಸ್‌ ಬುಕ್‌ ಸ್ಪಷ್ಟನೆ ನೀಡಿದ್ದು, ಇನ್ನು ಮುಂದೆ ಅನುಮಾನಾಸ್ಪದವಾಗಿ ಬೇರೆಯವರು ಖಾತೆ ತೆರೆಯಲು ಪ್ರಯತ್ನಿಸಿದರೆ ಖಾತೆದಾರರಿಗೆ ಮಾಹಿತಿ ರವಾನೆಯಾಗಲಿದೆ ಎಂದಿದ್ದಾರೆ.  ಇನ್ನು ಫೇಸ್‌ ಬುಕ್‌ನಲ್ಲಿರುವ‌ ಸಿಬ್ಬಂದಿ ಯಾವುದೇ ಕಾರಣಕ್ಕೂ‌ ಖಾತೆಗಳನ್ನು ತೆರೆಯುವುದಿಲ್ಲ. ಇದರೊಂದಿಗೆ ಯಾರಿಗೂ ಖಾತೆದಾರರ ಮಾಹಿತಿಯನ್ನು ಫೇಸ್‌ ಬುಕ್‌ ಹಂಚಿಕೊಳ್ಳುವುದಿಲ್ಲ ಎಂದಿದ್ದು, 2 ಸ್ಟೆಪ್ ವೆರಿಫಿಕೇಶನ್‌ ನಿಂದ ಖಾತೆಗಳನ್ನು ಮತ್ತಷ್ಟು ‌ಸುರಕ್ಷಿತವಾಗಿಟ್ಟುಕೊಳ್ಳಬಹುದು ಎಂದಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ