ನಟಿ ಜಯಪ್ರದಾ ನಾಪತ್ತೆ: ಅರೆಸ್ಟ್ ವಾರಂಟ್ ಹೊರಡಿಸಿದ ಕೋರ್ಟ್

Krishnaveni K

ಬುಧವಾರ, 28 ಫೆಬ್ರವರಿ 2024 (13:25 IST)
ಹೈದರಾಬಾದ್: ಬಿಜೆಪಿ ಮಾಜಿ ಸಂಸದೆ ಮತ್ತು ನಟಿ ಜಯಪ್ರದಾ ವಿರುದ್ಧ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಕೋರ್ಟ್ ತಲೆಮರೆಸಿಕೊಂಡಿರುವ ಅಪರಾಧಿ ಎಂದು ಘೋಷಣೆ ಮಾಡಿ ಅರೆಸ್ಟ್ ವಾರೆಂಟ್ ಹೊರಡಿಸಿದೆ.

ಜಯಪ್ರದಾಗೆ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಆದರೆ ಇದುವರೆಗೆ ಜಯಪ್ರದಾ ಕೋರ್ಟ್ ಗೆ ಹಾಜರಾಗಿರಲಿಲ್ಲ. ಹೀಗಾಗಿ ಅವರನ್ನು ತಲೆಮರೆಸಿಕೊಂಡಿರುವ ಆರೋಪಿ ಎಂದು ಘೋಷಿಸಿರುವ ರಾಂಪುರ ಕೋರ್ಟ್ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.

ಕೋರ್ಟ್ ನೀಡಿದ್ದ ನೋಟಿಸ್ ಗೆ ಜಯಪ್ರದಾ ಉತ್ತರಿಸಿರಲಿಲ್ಲ, ಜೊತೆಗೆ ಅವರ ಫೋನ್ ಕೂಡಾ ಸ್ವಿಚ್ ಆಫ್ ಆಗಿದೆ. ಕೋರ್ಟ್ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಜಯಪ್ರದಾ ತಲೆಮರೆಸಿಕೊಂಡಿದ್ದಾರೆ ಎಂದು ಕೋರ್ಟ್ ಗೆ ವರದಿ ಸಲ್ಲಿಸಲಾಗಿದೆ. ಹೀಗಾಗಿ ಆಕೆಯನ್ನು ತಲೆಮರೆಸಿಕೊಂಡಿರುವ ಅಪರಾಧಿ ಎಂದು ಕೋರ್ಟ್ ಹೇಳಿದೆ.

ಈ ಕಾರಣಕ್ಕೆ ಕೋರ್ಟ್ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ. ಆಕೆಯನ್ನು ಅರೆಸ್ಟ್ ಮಾಡಲು ಕ್ರಮ ಕೈಗೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ ಅಲ್ಲದೆ, ಮಾರ್ಚ್‍ 6 ಕ್ಕೆ ಮುಂದಿನ ವಿಚಾರಣೆ ಕಾದಿರಿಸಿದೆ. ಕೋರ್ಟ್ ಆಣತಿಯಂತೆ ಪೊಲೀಸರು ಈಗ ವಿಶೇಷ ತಂಡ ರಚಿಸಿ ಆಕೆಯ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ. ತಮ್ಮ ನೌಕರರಿಗೆ ಇಎಸ್ ಐ ನೀಡದೇ ವಂಚನೆ ಮತ್ತು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಎರಡು ಪ್ರಕರಣಗಳು ಜಯಪ್ರದಾ ಮೇಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ