‘ಪೊಗರು’ ಸಿನಿಮಾದಲ್ಲಿ ಅಳಿಯ ಧ್ರುವ ಸರ್ಜಾಗೆ ಮಾವ ಅರ್ಜುನ್ ಸರ್ಜಾ ಸಾಥ್

ಮಂಗಳವಾರ, 22 ಡಿಸೆಂಬರ್ 2020 (09:49 IST)
ಬೆಂಗಳೂರು: ಪೊಗರು ಸಿನಿಮಾವನ್ನು ಬೇರೆ ಭಾಷೆಗಳಲ್ಲೂ ಬಿಡುಗಡೆ ಮಾಡಲು ಉದ್ದೇಶಿಸಿರುವ ಚಿತ್ರತಂಡ ಅದಕ್ಕಾಗಿ ತಯಾರಿ ನಡೆಸಿದೆ. ಇದೀಗ ಧ್ರುವ ಸರ್ಜಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಹಾಕಿಕೊಂಡ ಫೋಟೋವೊಂದು ಎಲ್ಲರ ಗಮನ ಸೆಳೆಯುತ್ತಿದೆ.


ಪೊಗರು ಸಿನಿಮಾ ವಿಚಾರವಾಗಿ ಅರ್ಜುನ್ ಸರ್ಜಾ ಜತೆಗೆ ಚೆನ್ನೈಗೆ ವಿಮಾನದಲ್ಲಿ ತೆರಳುತ್ತಿರುವ ಫೋಟೋ ಪ್ರಕಟಿಸಿರುವ ಧ್ರುವ ಸರ್ಜಾ ಸದ್ಯದಲ್ಲೇ ಪೊಗರು ಬಗ್ಗೆ ಅಪ್ ಡೇಟ್ ಕೊಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ತಮಿಳಿನಲ್ಲೂ ಚಿತ್ರ ಬಿಡುಗಡೆ ಮಾಡುವ ವಿಚಾರಕ್ಕೆ ಅಳಿಯನಿಗೆ ಅರ್ಜುನ್ ಸಾಥ್ ನೀಡುತ್ತಿದ್ದಾರಾ ಎಂಬ ಸುದ್ದಿ ಹುಟಟಿಕೊಂಡಿದೆ. ಸದ್ಯದಲ್ಲೇ ಇದರ ಬಗ್ಗೆ ಧ್ರುವ ಸ್ಪಷ್ಟನೆ ನೀಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ