ತಲೈವಾ ರಜನೀಕಾಂತ್ ಗೆ ವಿಲನ್ ಆಗಲಿದ್ದಾರೆ ದುನಿಯಾ ವಿಜಯ್

ಸೋಮವಾರ, 30 ಅಕ್ಟೋಬರ್ 2023 (08:50 IST)
ಚೆನ್ನೈ: ತೆಲುಗಿನಲ್ಲಿ ಬಾಲಕೃಷ್ಣ ನಾಯಕರಾಗಿರುವ ಸಿನಿಮಾದಲ್ಲಿ ವಿಲನ್ ರೋಲ್ ಮಾಡಿದ್ದ ದುನಿಯಾ ವಿಜಯ್ ಈಗ ತಮಿಳು ಚಿತ್ರರಂಗಕ್ಕೆ ಕಾಲಿಡಲಿದ್ದಾರೆ.

ತಮಿಳಿನಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಸಿನಿಮಾದಲ್ಲಿ ದುನಿಯಾ ವಿಜಿ ಖಳ ನಾಯಕನ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ರಜನಿ 171 ನೇ ಸಿನಿಮಾದಲ್ಲಿ ವಿಜಯ್ ವಿಲನ್ ರೋಲ್ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಇದು ಲೋಕೇಶ್ ಕನಗರಾಜು ನಿರ್ದೇಶನದ ಸಿನಿಮಾವಾಗಿರಲಿದೆ. ಈಗಾಗಲೇ ಒಂದು ಸುತ್ತಿನ ಮಾತುಕತೆಯೂ ನಡೆದಿದೆ ಎನ್ನಲಾಗಿದೆ. ಆದರೆ ಅಧಿಕೃತ ಪ್ರಕಟಣೆ ಇನ್ನೂ ಬಂದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ