ಮದುವೆ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನಿಖಿಲ್-ರೇವತಿ ದಂಪತಿ

ಬುಧವಾರ, 29 ಏಪ್ರಿಲ್ 2020 (09:12 IST)
ಬೆಂಗಳೂರು: ನಟ ನಿಖಿಲ್ ಕುಮಾರಸ್ವಾಮಿ ಮದುವೆಯಾದ ಬಳಿಕ ಪತ್ನಿ ರೇವತಿ ಜತೆಗೆ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅದೂ ಒಂದು ಒಳ್ಳೆಯ ಕೆಲಸಕ್ಕಾಗಿ.

 
ಲಾಕ್ ಡೌನ್ ಇರುವ ಕಾರಣಕ್ಕೆ ನವದಂಪತಿ ಇದುವರೆಗೆ ಹೊರಗೆಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಜೆಡಿಎಸ್ ವತಿಯಿಂದ ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾದ ಸುಮಾರು 1 ಲಕ್ಷ ಬಡವರ ಕುಟುಂಬದವರಿಗೆ ಆಹಾರ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಎಚ್ ಡಿ ಕುಮಾರಸ್ವಾಮಿ-ಅನಿತಾ ಕುಮಾರಸ್ವಾಮಿ ಜತೆಗೆ ನಿಖಿಲ್ ದಂಪತಿ ಕೂಡಾ ಪಾಲ್ಗೊಂಡಿದ್ದಾರೆ.

ಅತ್ತೆ-ಮಾವ ಮತ್ತು ಗಂಡನ ಜತೆಗೆ ತಾವೂ ಆಹಾರ ಕಿಟ್ ವಿತರಿಸಲು ರೇವತಿ ನೆರವಾಗಿದ್ದಾರೆ. ಚನ್ನಪಟ್ಟಣ ತಾಲೂಕಿನ ಜನರಿಗೆ ಎಚ್ ಡಿಕೆ ಪರಿವಾರ ಆಹಾರ ಕಿಟ್ ವಿತರಣೆ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ