ಡಿಂಪಲ್ ಕ್ವೀನ್ ರಚಿತಾ ರಾಮ್ ಈಗ ‘ಪಂಕಜ ಕಸ್ತೂರಿ’

ಗುರುವಾರ, 29 ಅಕ್ಟೋಬರ್ 2020 (12:07 IST)
ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಹೊಸ ಸಿನಿಮಾ ಟೈಟಲ್ ಅನೌನ್ಸ್ ಆಗಿದೆ. ‘ಪಂಕಜ ಕಸ್ತೂರಿ’ ಎಂಬುದು ರಚಿತಾ ಹೊಸ ಸಿನಿಮಾ ಹೆಸರು.


ಈ ಮೊದಲು ಕಸ್ತೂರಿ ಮಹಲ್ ಎಂಬ ಸಿನಿಮಾವನ್ನು ರಚಿತಾ ಒಪ್ಪಿಕೊಂಡು, ಬಳಿಕ ಹೊರಬಂದಿದ್ದರು. ಇದೀಗ ರಚಿತಾ ಹೊಸ ಸಿನಿಮಾಗೂ ಕಸ್ತೂರಿ ಹೆಸರು ಅಂಟಿಕೊಂಡಿರುವುದು ವಿಶೇಷ. ಮಯೂರ ರಾಘವೇಂದ್ರ ನಿರ್ದೇಶನದ ಹೊಸ ಸಿನಿಮಾದ ಪ್ರಿಪ್ರೊಡಕ್ಷನ್ ಕೆಲಸ ಈಗ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ