ತಲೈವಾ ‘ದರ್ಬಾರ್’ಗೆ ಯು/ಎ ಸರ್ಟಿಫಿಕೇಟ್: ಕಿಸ್ ದೃಶ್ಯಕ್ಕೆ ಕತ್ತರಿ

ಶನಿವಾರ, 4 ಜನವರಿ 2020 (12:13 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಸಿನಿಮಾ ಎಂದರೆ ಅದರ ಅಬ್ಬರವೇ ಬೇರೆ ರೀತಿ. ಇದೀಗ ರಜನಿ ಅಭಿಮಾನಿಗಳು ಮತ್ತೆ ಸಂಭ್ರಮಿಸುವ ಸಮಯ ಬಂದಿದೆ.


ತಲೈವಾ ರಜನಿ ಅಭಿನಯದ ‘ದರ್ಬಾರ್’ ಸಿನಿಮಾ ವೀಕ್ಷಿಸಿದ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಜನವರಿ 9 ರಿಂದ ರಜನಿ ಸಿನಿಮಾ ತೆರೆಗೆ ಬರಲಿದೆ.

ಈಗಾಗಲೇ ತಮಿಳುನಾಡು ಮಾತ್ರವಲ್ಲದೆ, ಕರ್ನಾಟಕದಲ್ಲೂ ದರ್ಬಾರ್ ಹವಾ ಜೋರಾಗಿಯೇ ಇದೆ. ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಕಿಸ್ಸಿಂಗ್ ಸೀನ್ ಸೇರಿದಂತೆ ಒಟ್ಟು 11 ದೃಶ್ಯಗಳಿಗೆ ಕತ್ತರಿ ಹಾಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ