ರಶ್ಮಿಕಾ ಮಂದಣ್ಣ ಮುಂದಿನ ಕನ್ನಡ ಚಿತ್ರ ಇದುವೇ?!

ಶುಕ್ರವಾರ, 14 ಫೆಬ್ರವರಿ 2020 (10:18 IST)
ಬೆಂಗಳೂರು: ತೆಲುಗಿನಲ್ಲಿ ಬ್ಯುಸಿಯಾಗಿರುವ ಕನ್ನಡತಿ ರಶ್ಮಿಕಾ ಮಂದಣ್ಣ ಮುಂದಿನ ಕನ್ನಡ ಸಿನಿಮಾ ಯಾವುದು? ಈ ಪ್ರಶ್ನೆಗೆ ಅವರು ಪೊಗರು ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಪರೋಕ್ಷ ಉತ್ತರ ನೀಡಿ ಜಾರಿಕೊಂಡಿದ್ದಾರೆ.


ಪೊಗರು ಬಳಿಕ ಯಾವ ಕನ್ನಡ ಸಿನಿಮಾದಲ್ಲಿ ನಟಿಸ್ತಿದ್ದೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಹೌದು, ಒಂದು ಕನ್ನಡ ಸಿನಿಮಾ ಮಾಡಲಿದ್ದೇನೆ. ಆದರೆ ಅದು ಯಾವುದು ಎಂಬುದನ್ನು ಈಗಲೇ ಹೇಳಲ್ಲ. ನಿಮಗೆ ಗೊತ್ತಲ್ವಾ? ನಾನು ಎಲ್ಲವನ್ನೂ ಸೀಕ್ರೆಟ್ ಮಾಡ್ತೀನಿ ಎಂದು ಜಾರಿಕೊಂಡಿದ್ದರು.

ಆದರೆ ಈಗ ಶ್ರೀಮುರಳಿ ಅಭಿನಯದ ‘ಮದಗಜ’ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿರಬಹುದೇ ಎಂಬ ಪ್ರಶ್ನೆ ಹುಟ್ಟಿದೆ. ಯಾಕೆಂದರೆ ಮದಗಜ ಚಿತ್ರತಂಡ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿ ನಮ್ಮ ಚಿತ್ರದ ಸ್ಟಾರ್ ನಾಯಕಿ ಯಾರು ಎಂದು ಪತ್ತೆ ಮಾಡಿ ಎಂದು ಸುಳಿವು ಕೊಟ್ಟಿತ್ತು. ಪೋಸ್ಟರ್ ನಲ್ಲಿ ನಾಯಕಿಯ ಹಿಂಬದಿಯ ಪೋಸ್ ಇದೆ. ಈ ಪೋಸ್ ನೋಡಿದರೆ ಇದು ರಶ್ಮಿಕಾ ಇರಬಹುದು ಎಂಬ ಗುಮಾನಿ ಹುಟ್ಟಿಕೊಂಡಿದೆ. ಪ್ರೇಕ್ಷಕರೂ ಇದು ರಶ್ಮಿಕಾ ಇರಬಹುದು ಎಂಬ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲದಕ್ಕೂ ಚಿತ್ರತಂಡ ಸದ್ಯದಲ್ಲೇ ಉತ್ತರ ಕೊಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ