ಅಲ್ಲು ಅರ್ಜುನ್ ಗೆ ಜೋಡಿಯಾದ ರಶ್ಮಿಕಾ ಮಂದಣ್ಣ

ಮಂಗಳವಾರ, 9 ಏಪ್ರಿಲ್ 2019 (09:18 IST)
ಹೈದರಾಬಾದ್: ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಒಂದಾದ ಮೇಲೊಂದರಂತೆ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಡಿಯರ್ ಕಾಮ್ರೇಡ್ ನಂತರ ನಿತಿನ್ ಜತೆಗೆ ಒಂದು ಸಿನಿಮಾ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಇದೀಗ ಅಲ್ಲು ಅರ್ಜುನ್ ಗೆ ನಾಯಕಿಯಾಗುವ ಅದೃಷ್ಟ ಪಡೆದಿದ್ದಾರೆ.


ಅಲ್ಲು ಅರ್ಜುನ್ ಬರ್ತ್ ಡೇ ದಿನವಾದ ನಿನ್ನೆ ಹೊಸ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿರುವ ವಿಚಾರ ಹೊರಬಿದ್ದಿದೆ. ಸ್ವತಃ ರಶ್ಮಿಕಾ ‘ಎಕ್ಸೈಟೆಡ್’ ಎಂದು ಟ್ವೀಟ್ ಮಾಡಿ ವಿಷಯ ಖಚಿತಪಡಿಸಿದ್ದಾರೆ.

ಈಗಾಗಲೇ ತಮಿಳಿನಲ್ಲಿ ಕಾರ್ತಿ ಜತೆಗೆ ಅಭಿನಯಿಸುತ್ತಿರುವ ರಶ್ಮಿಕಾ, ವಿಜಯ್ ದೇವರಕೊಂಡ, ನಿತಿನ್ ನಂತರ ಇದೀಗ ಸ್ಟಾರ್ ನಟ ಅಲ್ಲು ಅರ್ಜುನ್ ಗೆ ನಾಯಕಿಯಾಗುವ ಮೂಲಕ ಮತ್ತೊಬ್ಬ ಸ್ಟಾರ್ ನಟನಿಗೆ ನಾಯಕಿಯಾಗುವ ಅವಕಾಶ ಪಡೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ