ದೀಕ್ಷಿತ್ ಶೆಟ್ಟಿ ಹೊಸ ಸಿನಿಮಾಗೆ ರಿಷಬ್ ಶೆಟ್ಟಿ, ರಶ್ಮಿಕಾ ಮಂದಣ್ಣ ಬೆಂಬಲ

Krishnaveni K

ಬುಧವಾರ, 7 ಫೆಬ್ರವರಿ 2024 (10:37 IST)
Photo Courtesy: Twitter
ಬೆಂಗಳೂರು: ಕನ್ನಡ ಪ್ರತಿಭೆ ದೀಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿರುವ ‘ಕೆಟಿಎಂ’ ಸಿನಿಮಾಗೆ ರಿಷಬ್ ಶೆಟ್ಟಿ, ರಶ್ಮಿಕಾ ಮಂದಣ್ಣ ಸಾಥ್ ನೀಡಿದ್ದಾರೆ.

ಕೆಟಿಎಂ ಸಿನಿಮಾದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದೆ. ರಿಷಬ್ ಶೆಟ್ಟಿ, ರಶ್ಮಿಕಾ ಮಂದಣ್ಣ, ರಚಿತಾ ರಾಂ, ಕೀರ್ತಿ ಸುರೇಶ್, ಶೈನ್ ಟಾಮ್ ಚಾಕೋ ಸೇರಿದಂತೆ ಸ್ಟಾರ್ ನಟರು ಟ್ರೈಲರ್ ಲಾಂಚ್ ಮಾಡಿ ಶುಭಾಶಯ ಕೋರಿದ್ದಾರೆ. ಕೆಟಿಎಂ ಸಿನಿಮಾ ಭಾವನಾತ್ಮಕ ಸಿನಿಮಾವಾಗಿದ್ದು, ಸ್ಯಾಡ್ ಎಂಡಿಂಗ್ ಸ್ಟೋರಿ ಇರಲಿದೆ. ಇದೊಂದು ಲವ್ ಸ್ಟೋರಿಯಾಗಿದ್ದು, ಟ್ರೈಲರ್ ಗಮನ ಸೆಳೆಯುವಂತಿದೆ.

ಕನ್ನಡ ಕಿರುತೆರೆಯಿಂದ ಗುರುತಿಸಿ ಬಳಿಕ ದಿಯಾ ಸಿನಿಮಾ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದ ದೀಕ್ಷಿತ್ ಈಗ ತೆಲುಗು, ಮಲಯಾಳಂ ಸಿನಿಮಾಗೂ ಎಂಟ್ರಿ ಕೊಟ್ಟಿದ್ದಾರೆ. ರಶ್ಮಿಕಾ ಜೊತೆಗೆ ತೆಲುಗಿನಲ್ಲಿ ಗರ್ಲ್ ಫ್ರೆಂಡ್ ಎನ್ನುವ ಸಿನಿಮಾ ಮಾಡುತ್ತಿದ್ದಾರೆ. ಈ ನಡುವೆ ಕೆಟಿಎಂ ಎನ್ನುವ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇತ್ತೀಚೆಗೆ ಇದರ ಹಾಡುಗಳು ರಿಲೀಸ್ ಆಗಿದ್ದು ಗಮನ ಸೆಳೆಯುವಂತಿದೆ. ದೀಕ್ಷಿತ್ ಗೆ ಜೋಡಿಯಾಗಿ ಸಂಜನಾ ದಾಸ್ ಮತ್ತು ಕಾಜಲ್ ಕುಂದರ್ ಅಭಿನಯಿಸಿದ್ದಾರೆ.

ದೀಕ್ಷಿತ್ ವಿಭಿನ್ನ ಪಾತ್ರ
ದೀಕ್ಷಿತ್ ಈ ಸಿನಿಮಾದಲ್ಲಿ ಎರಡು ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟ್ರೈಲರ್ ನೋಡಿ ಒಂದು ರೀತಿ ದಿಯಾ ಸಿನಿಮಾವನ್ನೇ ನೆನಪಿಸುವಂತಿದೆ ಎಂದು ಜನ ಅಂದುಕೊಳ್ಳುವುದು ಸಹಜ. ಆದರೆ ಆ ಸಿನಿಮಾಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಚಿತ್ರತಂಡ ಈಗಾಗಲೇ ಸ್ಪಷ್ಟಪಡಿಸಿದೆ. ಫೆಬ್ರವರಿ 16 ರಂದು ಸಿನಿಮಾ ರಿಲೀಸ್ ಆಗುತ್ತಿದೆ. ವ್ಯಾಲಂಟೈನ್ ವೀಕ್ ನಲ್ಲಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಕುಳಿತು ನೋಡಲು ಒಂದು ಸುಂದರ ಸಿನಿಮಾವಾಗಲಿದೆ.

ಟ್ರೈಲರ್ ಲಿಂಕ್ ಇಲ್ಲಿದೆ:

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ