ಡಾಲಿ ಧನಂಜಯ್-ರಮ್ಯಾ ನಟನೆಯ ಉತ್ತರಕಾಂಡ ಸಿನಿಮಾಗೆ ಶಿವಣ್ಣ ಸಾಥ್

ಸೋಮವಾರ, 20 ನವೆಂಬರ್ 2023 (09:50 IST)
Photo Courtesy: Twitter
ಬೆಂಗಳೂರು: ಡಾಲಿ ಧನಂಜಯ್ ನಾಯಕರಾಗಿರುವ ನಟಿ ರಮ್ಯಾ ಕಮ್ ಬ್ಯಾಕ್ ಮಾಡುತ್ತಿರುವ ಉತ್ತರಕಾಂಡ ಸಿನಿಮಾಗೆ ಶಿವರಾಜ್ ಕುಮಾರ್ ಸಾಥ್ ಕೊಟ್ಟಿದ್ದಾರೆ.

ಕೆಆರ್ ಜಿ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಉತ್ತರಕಾಂಡ ಸಿನಿಮಾ ಸೆಟ್‍ ಗೆ ಶಿವಣ್ಣ ಭೇಟಿ ಕೊಟ್ಟಿದ್ದಾರೆ. ಬರೀ ಭೇಟಿ ಮಾತ್ರವಲ್ಲ, ಈ ಸಿನಿಮಾದಲ್ಲಿ ಶಿವಣ್ಣ ವಿಶೇಷ ಪಾತ್ರ ಮಾಡಲಿರುವ ಸೂಚನೆಯನ್ನೂ ಕೆಆರ್ ಜಿ ಸಂಸ್ಥೆ ನೀಡಿದೆ.

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬಹಳ ವರ್ಷದ ಬಳಿಕ ಬೆಳ್ಳಿ ತೆರೆಗೆ ಕಮ್ ಬ್ಯಾಕ್ ಮಾಡುತ್ತಿರುವ ಸಿನಿಮಾ ಇದು. ಈ ಕಾರಣಕ್ಕಾಗಿಯೇ ಅಭಿಮಾನಿಗಳಲ್ಲಿ ಈ ಸಿನಿಮಾ ಬಗ್ಗೆ ವಿಶೇಷ ಕುತೂಹಲವಿದೆ. ಅದರ ಬೆನ್ನಲ್ಲೇ ಶಿವಣ್ಣ ಕೂಡಾ ಸೇರ್ಪಡೆಯಾಗಿರುವುದು ಕುತೂಹಲ ಹೆಚ್ಚಿಸಿದೆ. ಚಿತ್ರದಲ್ಲಿ ಶಿವಣ್ಣ ಖಡಕ್ ಪಾತ್ರವೊಂದನ್ನು ಮಾಡಲಿದ್ದಾರೆ ಎಂಬ ಮಾಹಿತಿಯಿದೆ. ಈಗಾಗಲೇ ತಮಿಳಿನಲ್ಲಿ ಎರಡು ಸಿನಿಮಾಗಳಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದ ಶಿವಣ್ಣ ಚಿತ್ರಕ್ಕೆ ವಿಶೇಷ ಕಳೆ ತಂದುಕೊಟ್ಟಿದ್ದರು. ಈಗ ಕನ್ನಡದಲ್ಲೇ ಅತಿಥಿ ಪಾತ್ರ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ