ಸಮಂತಾ ಅಕ್ಕಿನೇನಿಗೆ ಪೂಜಾ ಹೆಗ್ಡೆ ಕ್ಷಮೆ ಯಾಚಿಸಬೇಕು ಎಂದು ಟ್ವಿಟರಿಗರು ಒತ್ತಾಯಿಸಿದ್ದೇಕೆ?

ಶುಕ್ರವಾರ, 29 ಮೇ 2020 (08:54 IST)
ಹೈದರಾಬಾದ್: ನಟಿ ಪೂಜಾ ಹೆಗ್ಡೆ, ಸಮಂತಾ ಅಕ್ಕಿನೇನಿ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆಂದು ಅವರ ಮೇಲೆ ಸಮಂತಾ ಅಭಿಮಾನಿಗಳು ಸಿಟ್ಟಿಗೆದ್ದ ಪ್ರಸಂಗ ನಡೆದಿದೆ. ಅಷ್ಟಕ್ಕೂ ನಡೆದಿದ್ದೇನು ಗೊತ್ತಾ?


ಪೂಜಾ ಹೆಗ್ಡೆ ಇನ್ ಸ್ಟಾಗ್ರಾಂ ಪುಟದಲ್ಲಿ ಸಮಂತಾ ಅಷ್ಟೊಂದು ಸುಂದರವಾಗಿದ್ದಾಳೆ ಎಂದು ನನಗನಿಸುತ್ತಿಲ್ಲ ಎಂದು ಫೋಟೋ ಸಮೇತ ಸ್ಟೇಟಸ್ ಹಾಕಿದ್ದರು. ಆದರೆ ಇದಾದ ಕೆಲವೇ ಕ್ಷಣಗಳಲ್ಲಿ ಪೂಜಾ ನನ್ನ ಖಾತೆ ಹ್ಯಾಕ್ ಆಗಿದೆ. ಇದು ಹ್ಯಾಕರ್ ಗಳ ಕೆಲಸ ಎಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದರು.

ಆದರೆ ಸಮಂತಾ ಅಭಿಮಾನಿಗಳು ಮಾತ್ರ ಇದನ್ನು ನಂಬುತ್ತಿಲ್ಲ. ಪೂಜಾ ವಿವಾದವಾಗುತ್ತಿದ್ದಂತೇ ಹೀಗೊಂದು ತೇಪೆ ಹಾಕುವ ಕೆಲಸ ಮಾಡಿದ್ದಾರಷ್ಟೇ. ಆಕೆ ಕೂಡಲೇ ಸಮಂತಾ ಕ್ಷಮೆ ಕೇಳಬೇಕು ಎಂದು ಟ್ವಿಟರಿಗರು ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ