ಬರ್ತ್ ಡೇ ಆಚರಿಸಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ ನಟ ವಿಜಯ್

ಶುಕ್ರವಾರ, 12 ಜೂನ್ 2020 (11:37 IST)
ಚೆನ್ನೈ: ಕೊರೋನಾ ಕಾರಣದಿಂದ ಇತ್ತೀಚೆಗೆ ಸ್ಟಾರ್ ನಟರು ತಮ್ಮ ಬರ್ತ್ ಡೇ ಆಚರಿಸಿಕೊಳ್ಳುತ್ತಿಲ್ಲ. ಆ ಸಾಲಿಗೆ ತಮಿಳು ಸ್ಟಾರ್ ನಟ ವಿಜಯ್ ಕೂಡಾ ಸೇರಲಿದ್ದಾರೆ.


ಜೂನ್ 22 ರಂದು ವಿಜಯ್ ಬರ್ತ್ ಡೇ ಆಗಿದ್ದು, ಕೊರೋನಾ ಕಾರಣದಿಂದ ಬರ್ತ್ ಡೇಯನ್ನು ಅದ್ಧೂರಿಯಾಗಿ ಜನ ಸೇರಿಕೊಂಡು ಆಚರಿಸಬೇಡಿ, ನಾನೂ ಆಚರಿಸುತ್ತಿಲ್ಲ ಎಂದು ವಿಜಯ್ ಹೇಳಿದ್ದಾರೆ.

ಇತ್ತೀಚೆಗೆ ತಲಾ ಅಜಿತ್ ಕೂಡಾ ಬರ್ತ್ ಡೇ ಆಚರಿಸಿಕೊಂಡಿರಲಿಲ್ಲ. ಇದೀಗ ವಿಜಯ್ ಸರದಿ. ಜನ ಗುಂಪುಕಟ್ಟಿಕೊಂಡು ಬರ್ತ್ ಡೇ ಆಚರಿಸಲು ಒಂದೆಡೆ ಸೇರುವುದು ಈಗಿನ ಪರಿಸ್ಥಿತಿಯಲ್ಲಿ ಅಪಾಯಕಾರಿ. ಅದಕ್ಕೇ ಈ ನಿರ್ಧಾರ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ