ಲಾಡ್ಜ್ ನಲ್ಲಿ ತಾಯಿಯ ಅಕ್ರಮ ಸಂಬಂಧ ಬಿಚ್ಚಿಟ್ಟು ಹೆಣವಾದ 4 ವರ್ಷದ ಮಗ

ಸೋಮವಾರ, 24 ಫೆಬ್ರವರಿ 2020 (17:48 IST)

ನಾಲ್ಕು ವರ್ಷದ ಮಗನೊಬ್ಬ ತನ್ನ ತಾಯಿಯ ಅಕ್ರಮ ಸಂಬಂಧದ ಬಗ್ಗೆ ತಂದೆಗೆ ಹೇಳಿದ್ದರಿಂದಾಗಿ ಕೊಲೆಯಾಗಿದ್ದಾನೆ.
 

ಲೋಕೇಶ್ ಕೊಲೆಯಾದ ಬಾಲಕನಾಗಿದ್ದು, ಬಾಲಕನ ತಾಯಿಯ ಪ್ರಿಯಕರ ಸೂರಿಮುತ್ತು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ತಮಿಳುನಾಡಿನ ಅಂಟೋನಿಯಲ್ಲಿ ಘಟನೆ ನಡೆದಿದೆ. ಪ್ರಕಾಶ್ ಎಂಬುವನ ಪತ್ನಿ ದೀಪಾಳಿಗೆ ಸೂರಿಮುತ್ತು ಎನ್ನುವ ಪ್ರಿಯಕರನಿದ್ದ.

ಪ್ರಕಾಶ್ ಕೆಲಸಕ್ಕೆಹೊರಗೆ ಹೋದಾಗ ತನ್ನ ಮಗನೊಂದಿಗೆ ಸೂರಿಮುತ್ತುವಿನಿದ್ದ ಲಾಡ್ಜ್ ಗೆ ತೆರಳಿ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದಾಳೆ. ತಾಯಿ ಅನೈತಿಕ ಸಂಬಂಧವನ್ನು ಕಣ್ಣಾರೆ ಕಂಡ ಮಗ ಅಕ್ರಮ ಸಂಬಂಧದ ವಿಷಯವನ್ನು ತಂದೆಗೆ ತಿಳಿಸಿದ್ದಾನೆ.

ಇದರಿಂದ ಕೋಪಗೊಂಡ ಪ್ರಿಯಕರ ಸೂರಿಮುತ್ತು ತನ್ನ ಪ್ರಿಯತಮೆಯ ನಾಲ್ಕು ವರ್ಷದ ಬಾಲಕನಿಗೆ ಥಳಿಸಿದ್ದಾನೆ. ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದರೆ, ಸೂರಿಮುತ್ತು ನಾಪತ್ತೆಯಾಗಿದ್ದಾನೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ