ಶೇ 90 ರಷ್ಟು ಒಕ್ಕಲಿಗರು ಮೋದಿ, ದೇವೇಗೌಡರನ್ನು ಬೆಂಬಲಿಸುತ್ತಾರೆ: ಆರ್‌.ಅಶೋಕ್

Sampriya

ಶುಕ್ರವಾರ, 12 ಏಪ್ರಿಲ್ 2024 (20:27 IST)
ಮಂಡ್ಯ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯವು ಬಿಜೆಪಿಗೆ ಬೆಂಬಲ ನೀಡಲಿದೆ ಎಂದು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ನಾಯಕ ಆರ್ ಅಶೋಕ ಭರವಸೆ ವ್ಯಕ್ತಪಡಿಸಿದರು.

ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ಕರ್ನಾಟಕದ ಎರಡು ದೊಡ್ಡ ಸಮುದಾಯಗಳಾಗಿವೆ. ದಕ್ಷಿಣ ಕರ್ನಾಟಕದಿಂದ ಒಕ್ಕಲಿಗ ಮತ್ತು ಉತ್ತರ ಕರ್ನಾಟಕದಿಂದ ಲಿಂಗಾಯತ ಸಮುದಾಯಗಳು ಬಿಜೆಪಿಗೆ ಬೆಂಬಲ ನೀಡುತ್ತಾರೆಂದು ಭರವಸೆ ವ್ಯಕ್ತಪಡಿಸಿದರು.

"ಒಕ್ಕಲಿಗರಿಗೆ ಕರ್ನಾಟಕದಲ್ಲಿ ದೇವೇಗೌಡರು  ಪ್ರಮುಖ  ನಾಯಕರಾಗಿದ್ದಾರೆ. ಅವರು ಒಕ್ಕಲಿಗರ ಐಕಾನ್ ಆಗಿದ್ದಾರೆ. 90 ರಷ್ಟು ಒಕ್ಕಲಿಗ ಮತದಾರರು ಮೋದಿ ಮತ್ತು ದೇವೇಗೌಡರಿಗೆ ಮತ ಹಾಕುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದರು.

ಶಿವಮೊಗ್ಗದಲ್ಲಿ ಬಿಜೆಪಿ ವಿರುದ್ಧ ಹಿರಿಯ ಮುಖಂಡ ಈಶ್ವರಪ್ಪ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕುರಿತು ಪ್ರತಿಕ್ರಿಯಿಸಿದ ಅಶೋಕ ಅವರು, 'ಈಶ್ವರಪ್ಪನವರ ಸಮಸ್ಯೆ ಮುಗಿದಿದೆ ಎಂದು ಭಾವಿಸಿದ್ದೇನೆ, ತಾವು ಸ್ಪರ್ಧಿಸುವುದಾಗಿ ಈಗಾಗಲೇ ಹೇಳಿದ್ದು, ಶಿವಮೊಗ್ಗದಲ್ಲಿ ಬಿಜೆಪಿ ಗೆಲ್ಲಲಿದೆ' ಎಂದರು.

ಬಿಜೆಪಿಯ ಬಂಡಾಯ ನಾಯಕ ಈಶ್ವರಪ್ಪ ಶುಕ್ರವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.  ಬಿಜೆಪಿಯ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ರಾಘವೇಂದ್ರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ