ದೇಶಾದ್ಯಂತ ಲಾಕ್ ಡೌನ್ ಹಿನ್ನಲೆ; ಈ ಬಗ್ಗೆ ಗೃಹ ಸಚಿವರಿಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮನವಿ

ಗುರುವಾರ, 2 ಏಪ್ರಿಲ್ 2020 (10:56 IST)
ಬೆಂಗಳೂರು : ದೇಶದ್ಯಂತ ಲಾಕ್ ಡೌನ್ ಹಿನ್ನಲೆ ಆಯಾ ತಾಲೂಕು ಕಚೇರಿಗಳಲ್ಲಿ ಪಾಸ್ ನೀಡಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಲಾಕ್ ಡೌನ್ ನಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಕೆಳಹಂತದ ಪೊಲೀಸರಿಗೆ ಈ ಸಮಸ್ಯೆ ಅರ್ಥ ಆಗುತ್ತಿಲ್ಲ. ಸಂಬಂಧಿಕರ ಸಂಸ್ಕಾರಕ್ಕೂ ತೊಂದರೆ ಆಗಿದೆ. ಆಸ್ಪತ್ರೆಗೆ ಹೋಗಲಾಗದೆ ರೋಗಿಗಳು ಪರದಾಡುತ್ತಿದ್ದಾರೆ. ಅಂಥವರಿಗೆ ಕೂಡಲೇ ಕರ್ಪ್ಯೂ ಪಾಸ್ ಗಳನ್ನು ನೀಡಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ