ಬಕ್ರೀದ್ ಗಾಗಿ ಒಂಟೆ, ಗೋವು ಅಕ್ರಮವಾಗಿ ಸಾಗಿಸಿದ್ರೆ ಹುಷಾರ್

ಬುಧವಾರ, 7 ಆಗಸ್ಟ್ 2019 (14:04 IST)
ಬಕ್ರೀದ್ ಹಬ್ಬ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಬೇರೆ ಕಡೆಯಿಂದ ಅನಧಿಕೃತವಾಗಿ ಒಂಟೆ, ಗೋವುಗಳ ಸಾಗಾಣಿಕೆಯನ್ನು ತಡೆಗಟ್ಟಲು ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದ್ದು, ಅಕ್ರಮ ಎಸಗುವವರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಿದೆ.

ಆಗಸ್ಟ್ 12ರಂದು ಜಿಲ್ಲೆಯಾದ್ಯಂತ ಬಕ್ರೀದ್ ಹಬ್ಬ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕಲಬುರಗಿ ನಗರಕ್ಕೆ ಮತ್ತು ಜಿಲ್ಲೆಗೆ ಬೇರೆ ಕಡೆಯಿಂದ ಅನಧೀಕೃತವಾಗಿ ಒಂಟೆ, ಗೋವುಗಳ ಸಾಗಾಣಿಕೆಯನ್ನು ತಡೆಗಟ್ಟಲು ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಲಾಗುತ್ತದೆ ಅಂತ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ತಿಳಿಸಿದ್ರು.

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಅನಧಿಕೃತ ಒಂಟೆ, ಗೋವುಗಳ ಸಾಗಾಣಿಕೆ ತಡೆಗಟ್ಟುವ ಜಿಲ್ಲಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ್ರು. ಬಕ್ರೀದ್ ಹಬ್ಬ ಇರುವುದರಿಂದ ಇತರೆ ಜಿಲ್ಲೆಗಳಿಂದ ಅಕ್ರಮವಾಗಿ ಒಂಟೆ ಹಾಗೂ ಗೋವುಗಳು ಸಾಗಾಣಿಕೆಯಾಗುವ ಸಾಧ್ಯತೆಯಿದೆ. ಅಧಿಕಾರಿಗಳು ಇದನ್ನು ನಿಯಂತ್ರಿಸಬೇಕು ಎಂದ್ರು.

ಪ್ರತಿ ಚೆಕ್ ಪೋಸ್ಟ್ ನಲ್ಲಿ ಪೊಲೀಸ್, ಆರ್.ಟಿ.ಓ., ಪಶುಸಂಗೋಪನಾ ಮತ್ತು ಎಪಿಎಂಸಿ ಅಧಿಕಾರಿಗಳನ್ನೊಳಗೊಂಡ ತಂಡ ನಿಯೋಜಿಸಲಾಗುವುದು. ಈ ತಂಡವು ಪ್ರತಿ ವಾಹನವನ್ನು ಖುದ್ದಾಗಿ ತಪಾಸಣೆ ನಡೆಸಿ ನಗರದೊಳಗಡೆ ಪ್ರವೇಶ ಕಲ್ಪಿಸಬೇಕು.

ಯಾವುದೇ ವಾಹನದಲ್ಲಿ ಅಕ್ರಮವಾಗಿ ಒಂಟೆ ಅಥವಾ ಗೋವುಗಳ ಸಾಗಾಣಿಕೆಯ ಮಾಹಿತಿ ದೊರಕಿದಲ್ಲಿ ಸಾರ್ವಜನಿಕರು ನೇರವಾಗಿ ವಾಹನಗಳನ್ನು ಅಡ್ಡಗಟ್ಟಿ ದಾಂಧಲೆ ಮಾಡುವಂತಿಲ್ಲ. ಬದಲಾಗಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ