ನಮ್ಮ ಹಣ ಮಸೀದಿಗೆ ಯಾಕೆ ಕೊಡ್ತೀರಿ ಸಿದ್ದರಾಮುಲ್ಲಾಖಾನ್? ಅನಂತಕುಮಾರ್ ಹೆಗ್ಡೆ

Krishnaveni K

ಶನಿವಾರ, 24 ಫೆಬ್ರವರಿ 2024 (10:00 IST)
Photo Courtesy: Twitter
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತಕುಮಾರ್ ಹೆಗ್ಡೆ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮುಲ್ಲಾಖಾನ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಇತ್ತೀಚೆಗೆ ಹಿಂದೂ ದೇವಾಲಯಗಳ ಮೇಲೆ ಶೇ.10 ರಷ್ಟು ತೆರಿಗೆ ವಿಧಿಸುವ ಮಸೂದೆ ಪಾಸ್ ಮಾಡಿತ್ತು. ಈ ಬಗ್ಗೆ ವಿಪಕ್ಷ ಬಿಜೆಪಿ ತೀವ್ರ ಟೀಕೆ ಮಾಡಿದೆ. ಇದೀಗ ಸಂಸದ ಅನಂತಕುಮಾರ್ ಹೆಗ್ಡೆ ಕೂಡಾ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಮಸೀದಿಗೆ ಹಣ ಕೊಡುತ್ತೀರಿ. ನಮ್ಮ ದೇವರು ಏನು ಅಪರಾಧ ಮಾಡಿದ್ದಾರೆ? ಶೇ.99 ರಷ್ಟು ಹಿಂದೂಗಳು ತೆರಿಗೆ ಪಾವತಿ ಮಾಡುತ್ತಾರೆ. ಹಿಂದೂಗಳ ಹಣವನ್ನು ಮಸೀದಿ, ಚರ್ಚ್ ಗೆ ನೀಡುತ್ತೀರಿ. ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು ಎಂದು ನಾವು ಹೋರಾಟಕ್ಕಿಳಿದರೆ ಏನಾಗುತ್ತದೆ? ಹಿಂದೂ ಸಮಾಜದ ಪರ ಮಾತನಾಡುವವರು ಯಾರೂ ಇಲ್ಲ ಎಂದು ಹೀಗೆ ಮಾಡುತ್ತಿದ್ದೀರಾ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಏನು ನಿಮ್ಮ ಅಪ್ಪನ ಆಸ್ತಿನಾ? ನಮ್ಮ ತೆರಿಗೆ ಹಣ ನಮಗೆ ಕೊಡಿ. ದೇವಸ್ಥಾನಕ್ಕೆ ಕೊಡಲು ಸರ್ಕಾರದ ಬಳಿ ಹಣವಿಲ್ಲ. ಆದರೆ ಮಸೀದಿ, ಚರ್ಚ್ ಗೆ ನೀಡಲು ಹಣವಿದೆ. ರಾಜ್ಯ ಲೂಟಿ ಮಾಡಿ ಮತ ಪಡೆಯಲು ಹೊರಟಿದ್ದಾರೆ. ಸರ್ಕಾರಿ ನೌಕರರಿಗೆ ಕೊಡಲೂ ಹಣವಿಲ್ಲದಷ್ಟು ರಾಜ್ಯ ದಿವಾಳಿಯಾಗಿದೆ ಎಂದು ಅನಂತಕುಮಾರ್ ಟೀಕಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯನವರನ್ನು ಸಿದ್ದರಾಮಯ್ಯ ಅಲ್ಲ, ಸಿದ್ದರಾಮುಲ್ಲಾಖಾನ್ ಎಂದು ಸಂಬೋಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ