ಡಿಸಿಎಂ ಲಕ್ಷ್ಮಣ ಸವದಿ ಗ್ರಾಮದಲ್ಲಿ ಭಾರೀ ಅವ್ಯವಹಾರ?

ಬುಧವಾರ, 18 ಸೆಪ್ಟಂಬರ್ 2019 (15:04 IST)
ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಊರಿನಲ್ಲಿ ಭಾರೀ ಅವ್ಯವಹಾರ ಆಗಿರೋ ಆರೋಪ ಕೇಳಿಬಂದಿದೆ.

ನೆರೆ ಸಂತ್ರಸ್ಥರ ಪರಿಹಾರ ತಾರತಮ್ಯ ಖಂಡಿಸಿ ತಹಸೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಜನರು ಪ್ರತಿಭಟನೆ ನಡೆಸಿದ್ದಾರೆ.
ನೂರಾರು ಮಹಿಳೆಯರು ಮಕ್ಕಳ ಜೊತೆ ಭಾಗಿಯಾಗಿ ಪ್ರತಿಭಟನೆ ನಡೆಸಿದ್ರು. ಕೃಷ್ಣಾ ನದಿ ಪ್ರವಾಹ ಪೀಡಿತ ಸಂತ್ರಸ್ತರಿಂದ ತಹಸೀಲ್ದಾರಗೆ ತರಾಟೆಗೆ ತೆಗೆದುಕೊಳ್ಳಲಾಗಿದೆ.

ಮನೆಗಳ ಪರಿಹಾರ ವಿಷಯದಲ್ಲಿ ತಾರತಮ್ಯ ಆಗಿದೆ ಎಂದು ಆರೋಪ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಘಟನೆ ನಡೆದಿದ್ದು, ತಹಸೀಲ್ದಾರ ಎಮ್. ಎನ್. ಬಳಿಗಾರಗೆ ತರಾಟೆಗೆ ತೆಗೆದುಕೊಂಡಿದ್ದಾರೆ ನಾಗನೂರ ಪಿ ಕೆ ಗ್ರಾಮಸ್ಥರು.

ಪಿ.ಕೆ.ನಾಗನೂರು, ಡಿ ಸಿ ಎಮ್ ಲಕ್ಷ್ಮಣ ಸವದಿ ಅವರ ಸ್ವಗ್ರಾಮವಾಗಿದೆ. ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾಗಿದ್ದ ಗ್ರಾಮದಲ್ಲಿ ಪಂಚಾಯತಿಯವರು ಅವ್ಯವಹಾರ ಮಾಡಿರುವದಾಗಿ ಆರೋಪ ಕೇಳಿಬಂದಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ