ದೆಹಲಿ ಚುನಾವಣೆಯಲ್ಲಿ ಸೋತ ಬಿಜೆಪಿ : ಮೋದಿ – ಅಮಿತ್ ಶಾಗೆ ಮುಖಭಂಗ

ಮಂಗಳವಾರ, 11 ಫೆಬ್ರವರಿ 2020 (19:45 IST)
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಬೇಕು ಅಂತಿದ್ದ ಬಿಜೆಪಿ ಕನಸು ನುಚ್ಚು ನೂರಾಗಿದೆ. ಇದಕ್ಕೆ ಬಿಜೆಪಿ ಹೈಕಮಾಂಡ್ ಪ್ರತಿಕ್ರಿಯೆ ನೀಡಿದೆ.

ಎಲೆಕ್ಷನ್ ಫಲಿತಾಂಶದಲ್ಲಿ ಮತದಾರರು ಯಾವ ತೀರ್ಪನ್ನು ನೀಡಿದ್ದಾರೋ ಅದನ್ನು ನಾವು ಗೌರವಿಸುತ್ತೇವೆ. ಹೀಗಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದ್ದಾರೆ.

ದೆಹಲಿಯನ್ನು ಇನ್ನಷ್ಟು ಅಭಿವೃದ್ಧಿ ಮಾಡಬೇಕು ಅಂತ ಆಪ್ ಗೆ ಮತ ಹಾಕಿ ಜನರು ಅರವಿಂದ ಕೇಜ್ರಿವಾಲ್ ರನ್ನು ಮತ್ತೆ ಸಿಎಂ ಮಾಡಿದ್ದಾರೆ ಅಂತ ಹೇಳಿದ್ದಾರೆ.

ಬಿಜೆಪಿಯು ವಿರೋಧ ಪಕ್ಷದಲ್ಲಿದ್ದು ರಚನಾತ್ಮಕ ಕೆಲಸ ಮಾಡುತ್ತೆ ಅಂತ ನಡ್ಡಾ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ