ಕೊರೊನಾ ತಡೆಗೆ ಒಂದು ಕೋಟಿ ನೆರವು ನೀಡಿದ ಬಿಜೆಪಿ ಸಂಸದ

ಸೋಮವಾರ, 30 ಮಾರ್ಚ್ 2020 (17:46 IST)
ಕೋವಿಡ್ -19, ನೊವೇಲ್ ಕೊರೋನಾ ವೈರಸ್ ತಡೆಗಟ್ಟುವ ನಿಯಂತ್ರಣಕ್ಕಾಗಿ ಬಿಜೆಪಿ ಸಂಸದರೊಬ್ಬರು ಒಂದು ಕೋಟಿ ರೂ. ನೆರವು ನೀಡಿದ್ದಾರೆ.

ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಿಂದ (ಎಂಪಿಎಲ್‌ಎಡಿಎಸ್) ಕೊಪ್ಪಳ  ಸಂಸದ ಸಂಗಣ್ಣ ಕರಡಿ ಅವರು 1 ಕೋಟಿ ರೂ. ನೆರವು ನೀಡಿದ್ದಾರೆ.

ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಅವರನ್ನು ಭೇಟಿ ಮಾಡಿ, ಎಂಪಿಎಲ್‌ಎಡಿಎಸ್ ಯೋಜನೆಯ ಅನುದಾನದಡಿ ಪ್ರಧಾನಿ ಮಂತ್ರಿಗಳ ಪರಿಹಾರ ನಿಧಿಗೆ ಸಂಸದರ  ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಿಂದ ರೂ. 1 ಕೋಟಿ ನೀಡಲು ಒಪ್ಪಿಗೆ ಪತ್ರವನ್ನು ನೀಡಿದರು.

ಕೊಪ್ಪಳ ಜಿಲ್ಲೆಯಲ್ಲಿ ಕೊರಾನಾ ತಡೆಗಟ್ಟಲು ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಸದ್ಯದ ಪರಿಸ್ಥಿತಿ ಹಾಗೂ ಮುಂದಿನ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಾಧ್ಯವಿರುವ ಎಲ್ಲಾ ನೆರವು ಒದಗಿಸಿ ಕೊಡುವಲ್ಲಿ ಪ್ರಯತ್ನ ಮಾಡುವದಾಗಿ ಸಂಸದ ಸಂಗಣ್ಣ ಕರಡಿ ಹೇಳಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ