ಸಾಮಾಜಿಕ ಅಂತರದಿಂದ ಬಸ್ ಸಂಚಾರ ನಷ್ಟದಲ್ಲಿ!

ಶುಕ್ರವಾರ, 29 ಮೇ 2020 (19:08 IST)
ಸಾರಿಗೆ ಇಲಾಖೆಯ ಬಸ್ ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಕರು ಸಂಚರಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದರಿಂದ ಸಾರಿಗೆ ಇಲಾಖೆಗೆ ಅಪಾರ ನಷ್ಟವಾಗುತ್ತಿದೆ.

ಕೋವಿಡ್ -19 ಲಾಕ್ ಡೌನ್ ನಿಂದ ಸಾರಿಗೆ ಇಲಾಖೆಗೆ ಸುಮಾರು 1800 ಕೋಟಿ ರೂಪಾಯಿಗಳಷ್ಟು ನಷ್ಟ ಉಂಟಾಗಿದ್ದು, ಲಾಕ್ ಡೌನ್ ಕುರಿತು ಕೇಂದ್ರ ಸರ್ಕಾರ ಜೂನ್ 1 ರಂದು ಹೊರಡಿಸುವ ಹೊಸ ಸುತ್ತೋಲೆಯನ್ನು ನೋಡಿಕೊಂಡು ಪುನಃ ಪರಿಶೀಲನೆ ಮಾಡುತ್ತೇವೆ.

ಈ ಕುರಿತು ಸಚಿವ ಸಂಪುಟ ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇಲ್ಲ. ಹೊಸ ಬಸ್ ನೀಡುವಿಕೆ ಹಾಗೂ ಹಳೆಯ ವಾಹನಗಳ ಸಂಚಾರವನ್ನು ನಿಲ್ಲಿಸುವ ಬೇಡಿಕೆ ನಮ್ಮ ಮುಂದೆ ಇದೆ. ಲಾಕ್ ಡೌನ್ ಹಿನ್ನಲೆಯಲ್ಲಿ ಸಾರಿಗೆ ಇಲಾಖೆ ಸಾಕಷ್ಟು ನಷ್ಟ ಅನುಭವಿಸಿದ್ದು, ಇಂತಹ ಪರಿಸ್ಥಿತಿಯಲ್ಲಿ ವೆಚ್ಚವನ್ನು ಕಡಿಮೆ ಮಾಡುವಿಕೆ ಹಾಗೂ ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸಾರಿಗೆ ಇಲಾಖೆಯ ಸಿಬ್ಬಂದಿಗಳು ಕೆಲಸ ಮಾಡುವಂತೆ ಮನವಿ ಮಾಡಿದ್ದೇನೆ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ