ಟಾಪ್‌ನಲ್ಲಿದ್ದ ಬೈಜೂಸ್ ವ್ಯವಹಾರ..... ಮಕಾಡೆ ಮಲಗಿದ್ಹೇಗೆ....?

geetha

ಶನಿವಾರ, 24 ಫೆಬ್ರವರಿ 2024 (18:01 IST)
ಬೆಂಗಳೂರು-ಬಿಸಿನೆಸ್ ಅನ್ನೋದೇ ಹಾಗೆ ಏರಿಳಿತಗಳು ಮಮೂಲಿ.. ಹಾಗಾಂತ ಬಲೂ ಎತ್ತರದಲ್ಲಿ ಹೋಗಿ ನಿಂತ ವ್ಯವಹಾರ ಹಠಾತ್ ಆಗಿ ಕೆಳಗೆ ಬಿದ್ದು ಬಿಟ್ಟರೆ, ಉದ್ಯಮವನ್ನು ಕಟ್ಟಿ ಬೆಳೆಸಿದ ಆ ಉದ್ಯಮಿಯ ನೋವಿಗೆ ಮುಲಾಮು ಸಿಗೋದು ಬಹುತೇಕ ಕಷ್ಟ...?

ಆದ್ರೀಗ ಇಂತಹದ್ದೆ ಒಂದು ಪಾತಾಳಕ್ಕೆ ಬಿದ್ದ ಬ್ಯುಸಿನೆಸ್‌ನ ಕಣ್ಣಿರಿನ ಕಥೆಯನ್ನು ಹೇಳುವ ಸಂದರ್ಭ ಒದಗಿ ಬಂದಿದೆ... ಆದ್ರೆ ಯಾಕಾಯ್ತು, ಹೇಗಾಯ್ತು ಅನ್ನೋದು ಆ ನಂತರದ ವಿಚಾರ... ಆದರೂ ಆರಂಭದ ದಿನಗಳಲ್ಲಿ ಬಹು ಯಶಸ್ಸಿನ ಉತ್ತುಂಗಕ್ಕೆ ಹೋಗಿ ನಿಂತಿದ್ದ, ಕೇರಳದಲ್ಲಿ ಜನಿಸಿದ ಆ ಟ್ಯೂಷನ್ ಟೀಚರ್ ಕಟ್ಟಿ ಬೆಳೆಸಿದ್ದ ಉದ್ಯಮವೊಂದು ದಿಢೀರ್ ಅಂತ ಕೆಳಗೆ ಬಿದ್ದು ಹೋಗುತ್ತೆ ಅಂದ್ರೆ, ಇದಕ್ಕಿಂತ ದೊಡ್ಡ ದುರಂತ ಮತ್ತೊಂದೇನಿದೆ ಹೇಳಿ....?
 
ಯೆಸ್.. ನಾವೀಗಾ ಹೇಳ್ತಾ ಇರೋದು ಶ್ರೀಮಂತ ಉದ್ಯಮಿಯ ಪಟ್ಟದಿಂದ, ಅಚಾನಕ್ ಆಗಿ ಅವನತಿಯ ಹಾದಿಗೆ ಬಂದು ನಿಂತ ಬೈಜೂಸ್ ಸ್ಥಾಪಕ ಬೈಜೂ ರವಿಂದ್ರನ್ ಕರಾಳ ಚರಿತ್ರೆಯನ್ನ....?
 
ಹೌದು ಯಾವುದೇ ಕ್ಷೇತ್ರದಲ್ಲಿ ಹೂಡಿಕೆ ಮಾಡಿ ಉದ್ಯಮವನ್ನು ಆರಂಭಿಸಿದರೂ, ಲಾಭ ನಷ್ಟದ ಕಥೆಗಳು ನಡೆದು ಹೋಗುತ್ತಿರುತ್ತವೆ.. ಹಾಗೆ ನೋಡಿದರೆ ಅದನ್ನೇ ವ್ಯವಹಾರ ಅನ್ನೋದು....?
 
ಯೆಸ್... ಇದೀಗ ನೇರವಾಗಿ ಮ್ಯಾಟರ್‌ಗೆ ಬಂದು ಬಿಡೋಣ, ಬೈಜೂಸ್ ಗಳಿಸಿದ ಹಿರಿಮೆ-ಗರಿಮೆಗಳಲ್ಲ ನೀರಿನಲ್ಲಿ ಹೋಮ ಮಾಡಿದಂತೆ ಆಗಿ ಬಿಟ್ಟಿದೆ.. ಎಲ್ಲವೂ ಅದ್ವಾನದ ಹಂತಕ್ಕೆ ಹೋಗಿ ತಲುಪಿದೆ. ಹೇಳಿಕೊಳ್ಳೊದಕ್ಕೂ ಆಗದಷ್ಟು ಮುಖಭಂಗದ ಸ್ಥಿತಿಯನ್ನು ತಲುಪಿದೆ ಪ್ರತಿಷ್ಠಿತ ಸ್ಥಾನದಲ್ಲಿದ್ದ ಬೈಜೂ ರವಿಂದ್ರನ್ ಹುಟ್ಟು ಹಾಕಿದ್ದ, ಬೈಜೂಸ್ ಉದ್ಯಮ....?
 
ಈಗ ಆಲ್‌ಮೊಸ್ಟ್ ಪ್ರಪಾತಕ್ಕೆ ಹೋಗಿ ತಲುಪಿದೆ ಬೈಜೂಸ್‌ನ ಮಾರುಕಟ್ಟೆಯ ಮೌಲ್ಯ... ಹೇಗೆಲ್ಲ ಬೆಳೆದು ಬಂದ ಬೈಜೂಸ್, ಹೀಗೆಲ್ಲಾ ಆಗಿ ಹೋಯ್ತಾ ಅನ್ನುವ ಮಟ್ಟಿಗೆ ಜಗತ್ತು ಮಾತಾನಾಡುವ ಹಾಗೆ ಆಗಿದೆ ಇದರ ಸದ್ಯದ ಪರಿಸ್ಥಿತಿ.. ಫೈನಲೀ ಬೈಜೂಸ್ ಬೀದಿಗೆ ಬಂದು ನಿಂತಿದೆ.
 
ದುರAತ ಅಂತ್ಯವನ್ನು ಕಂಡಿರುವ ಬೈಜೂಸ್‌ನ ಪರಿಸ್ಥಿತಿಯನ್ನು ನೋಡಿದರೆ ಎಂತವರಿಗೂ ಅಯ್ಯೋ ಯಾಕೆ ಹೀಗಾಯ್ತಪ್ಪಾ ಅನ್ನುವಷ್ಟರ ಮಟ್ಟಿಗೆ ಕರುಳು ಕಿತ್ತು ಬರುವಷ್ಟು ಸಂಕಟವಾಗುತ್ತೆ. ಹೀಗಿರಬೇಕಾದರೆ ಇದರ ಹೊಡೆತವನ್ನು ತಿಂದ ಇದರ ಸಂಸ್ಥಾಪಕ ಬೈಜೂ ರವಿಂದ್ರನ್ ಮನಸ್ಥಿತಿ ಹೇಗಿರಬೇಡ..? 
 
ಬರೀ ಸಾಲ, ಟ್ಯಾಕ್ಸ್, ನಷ್ಟ, ಕಷ್ಟಗಳ ನಡುವೆ ಸಿಕ್ಕಿ ಹಾಕಿಕೊಂಡು ಒದ್ಡಾಡುವ ಹಂತದಲ್ಲಿರುವ ಬೈಜೂಸ್ ಕಂಪನಿಯೂ ಮುಂದೇ ಇನ್ನೂ ಯಾವ ಹಂತಕ್ಕೆ ತಲುಪುತ್ತೋ ಗೊತ್ತಿಲ್ಲ.. ಬಟ್ ಈಗಾಗಲೆ ಇದರ ಮಾರುಕಟ್ಟೆಯ ಮೌಲ್ಯಗಳು ನೆಲಕಚ್ಚಿರೋದ್ರಿಂದ ಸುಧಾರಿಸಿಕೊಳ್ಳುವ ಹಂತಕ್ಕೂ ಬರೋದು ಕಷ್ಟ ಸಾಧ್ಯ ಅಂತ ಹೇಳಲಾಗ್ತಿದೆ..?
 
ಬೈಜೂಸ್ ಕಂಡುಕೇಳರಿಯದ ದುರಂತ ಅಂತ್ಯ ಕಂಡಿದೆ. ಅದೆಷ್ಟು ವೇಗವಾಗಿ ಬೆಳೆದು ನಿಂತಿತೋ, ಅಷ್ಟೇ ವೇಗವಾಗಿ ತನ್ನ ಮಾರುಕಟ್ಟೆಯ ಮೌಲ್ಯಗಳನ್ನು ಕಳೆದುಕೊಂಡು ನೆಲಕಚ್ಚಿ ಹೋಗಿದೆ..? ಮುಳ್ಳಿನ ಹಾದಿಯಲ್ಲಿ ಹೆಜ್ಜೆ ಇಡುವ ಸಂದಿಗ್ಥ ಪರಿಸ್ಥಿತಿಯನ್ನು ತಲುಪಿರುವ ಬೈಜೂಸ್ ಯಾವುದೇ ಹಂತದಲ್ಲಿಯೂ ಮತ್ತೆ ಚೇತರಿಸಿಕೊಳ್ಳಲಾಗದಷ್ಟು ಅವನತಿಯ ಹಂತ ತಲುಪಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ