ಇಸ್ಲಾಂ ಧರ್ಮದ ವಿರುದ್ಧ ಅಪಪ್ರಚಾರ ಆರೋಪ; ಕೊಲೆ ಮಾಡಿದ 14 ಜನರ ಬಂಧನ

ಸೋಮವಾರ, 18 ಫೆಬ್ರವರಿ 2019 (14:51 IST)
ಉತ್ತರ ಪ್ರದೇಶ ಮೂಲದ ಯುವಕನೊಬ್ಬನ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.

ಕಲಬುರ್ಗಿ ಹೊರವಲಯದ ತಾವರಗೇರಾ ಕ್ರಾಸ್ ಬಳಿ ಯುವಕನ ಕೊಲೆ ಪ್ರಕರಣ ನಡೆದಿತ್ತು. ಮೃತ ಯುವಕನ ಗುರುತು ಪತ್ತೆಯಾಗಿದ್ದು, ಉತ್ತರ ಪ್ರದೇಶ ಮೂಲದ ಮಹ್ಮದ್ ಜಲಾಲ್ ಕೊಲೆಯಾದವನಾಗಿದ್ದಾನೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ 14 ಜನ ಆರೋಪಿಗಳ ಬಂಧನ ಮಾಡಲಾಗಿದೆ.

ತಬರೇಜ್, ಉಮರ್, ಅಮಜದ್, ಅಜರ್, ರಹೀಮ್, ಇಸ್ಮಾಯಿಲ್, ಹುಸೇನ್, ಮಹ್ಮದ್ ಉಮರ್, ಗೌಸ್, ಮುಕ್ರಂ, ಅಬ್ದುಲ್, ಚಾಂದ್ ಪಾಷಾ, ರಹೀಮ್ ಮತ್ತು ಮುದ್ದೆಪೀರ್ ಬಂಧಿತ ಆರೋಪಿಗಳಾಗಿದ್ದಾರೆ. ಇಸ್ಲಾಂ ಧರ್ಮದ ವಿರುದ್ಧ ಅಪ ಪ್ರಚಾರ ಮಾಡುತ್ತಿದ್ದಾನೆ ಎಂದು ಜಲಾಲ್ ಕೊಲೆ ನಡೆದಿದೆ. ಅಹ್ಮದ್ ಇಸಾ ಪಂಥಕ್ಕೆ ಸೇರಿದ್ದವನಾಗಿದ್ದನು  ಜಲಾಲ್.

ಉತ್ತರ ಪ್ರದೇಶದಿಂದ ಬಂದು ಇಸ್ಲಾಂ ಧರ್ಮವಿರೋಧಿ ಪ್ರಚಾರ ಮಾಡುತ್ತಿದ್ದನೆಂಬ ಆರೋಪ ಈತನ ಮೇಲಿತ್ತು. ಅಪ ಪ್ರಚಾರ ಮಾಡದಿರುವಂತೆ ಬುದ್ಧಿವಾದ ಹೇಳಿದರೂ ಕೇಳದ ಹಿನ್ನೆಲೆಯಲ್ಲಿ ಕೆಲ ವ್ಯಕ್ತಿಗಳಿಂದ ಕೊಲೆ ನಡೆದಿದೆ. ಪ್ರಕರಣದಲ್ಲಿ ಮತ್ತಷ್ಟು ವ್ಯಕ್ತಿಗಳು ಶಾಮೀಲಾಗಿದ್ದು, ಅವರ ಬಂಧನಕ್ಕೆ ಜಾಲ ಬೀಸಲಾಗಿದೆ
ಎಸ್.ಪಿ. ಎನ್.ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ