ಮಕ್ಕಳು ಪಬ್ಜಿ ಗೇಮ್ ಆಡ್ತಾ ಇದ್ದಾರಾ..? ಹಾಗಿದ್ದರೆ ಹುಷಾರ್...!

ಶುಕ್ರವಾರ, 15 ಮಾರ್ಚ್ 2019 (15:40 IST)
ಮಕ್ಕಳು ಟೈಮ್‌ಪಾಸ್‌ಗಾಗಿ ವೀಡಿಯೊ ಗೇಮ್‌ಗಳನ್ನು ಆಡಿದರೆ ಪರವಾಗಿಲ್ಲ. ಈಗ ಮಕ್ಕಳೆಲ್ಲಾ ಓದು- ಆಟದ ಕಡೆಗೆ ಹೆಚ್ಚಿನ ಗಮನಹರಿಸದೆ ಯಾವಾಗಲೂ ಮೊಬೈಲ್‌ಗೆ ದಾಸನಾಗಿರುತ್ತಾರೆ. ಆಡಬೇಡಿ ಎಂದು ಎಷ್ಟೇ ಹೇಳಿದರೂ ಅವರ ಮೇಲೆ ಕೋಪ ಮಾಡಿಕೊಳ್ಳುತ್ತಾರೆ.
 ಜೋರಾಗಿ ಬೈದರೆ ಊಟ-ತಿಂಡಿ ಬಿಡುವುದು ಹೀಗೆ ಮೊಬೈಲ್ ಗೇಮ್‌ಗಳ ಹುಚ್ಚು ಹಿಡಿದು ಪೋಷಕರಿಗೆ ಅವರನ್ನು ಹತೋಟಿಯಲ್ಲಿಡುವುದು ತುಂಬಾ ಕಷ್ಟವಾಗಿ ಹೋಗಿದೆ. ಹೀಗಿರುವಾಗ ಪಬ್ಜೀ ಗೇಮ್ ಹೇಳತೀರದು, ಆಡುವಾಗ ಯಾರಾದರೂ ಕರೆದರೆ ಕೇಳಿಸಿಕೊಳ್ಳುವುದೇ ಇಲ್ಲ ಅದರಲ್ಲಿಯೇ ಮಗ್ನರಾಗಿಬಿಟ್ಟಿರುತ್ತಾರೆ.
 
ಪಬ್ಜೀ ಗೇಮ್‌ನಲ್ಲಿ ಮಕ್ಕಳು ಆಡುತ್ತಾ ಅದರಲ್ಲಿಯೆ ತಲ್ಲಿನರಾಗಿ ತಮ್ಮ ದೃಷ್ಟಿಯನ್ನು ಬೇರೆಡೆ ಹರಿಸದೆ ಗೇಮ್‌ನಲ್ಲಿ ಶತ್ರುಗಳು ಎಲ್ಲಿ ದಾಳಿ ಮಾಡಿಬಿಡುತ್ತಾರೊ ಎನ್ನುವ ಭಯದಲ್ಲಿ ಮುಳುಗಿರುತ್ತಾರೆ. ಇಷ್ಟೆಲ್ಲಾ ಅಡಿಕ್ಟ್ ಆಗಿ ಮಕ್ಕಳು ಯಾರ ಮಾತು ಕೇಳಿಸಿಕೊಳ್ಳುವುದಿಲ್ಲ. ಈ ಗೇಮ್‌ಗೆ ಅಡಿಕ್ಟ್ ಆಗಿ ಪ್ರಾಣಗಳನ್ನೇ ತೆಗೆದುಕೊಳ್ಳುವ ಬಹಳಷ್ಟು ಮಕ್ಕಳಿದ್ದಾರೆ. 
 
ಮುಂಬೈನಲ್ಲಿ ನಡೆದ ಘಟನೆಯೊಂದರಲ್ಲಿ ಒಬ್ಬ ಹುಡುಗ ಮೊಬೈಲ್‌ನಲ್ಲಿ ಪ್ರತಿದಿನ ಪಬ್ಜಿ ಆಡುತ್ತಿದ್ದನಂತೆ, ಫೋನಲ್ಲಿ ಗೇಮ್ ತುಂಬಾ ಸ್ಲೋ ಆಗಿದೆ ಎಂದು ರೂ. 37 ಸಾವಿರ ರೂಪಾಯಿ ಹೊಸ ಫೋನ್ ಕೊಡಿಸಲು ಪೋಷಕರೊಂದಿಗೆ ಹಟ ಹಿಡಿಯುತ್ತಾನೆ, ಆದರೆ ಅಷ್ಟೊಂದು ಹಣ ಕೊಡಲು ಆಗುವುದಿಲ್ಲ ಎಂದ ಪೋಷಕರ ಮೇಲೆ ಕೋಪಗೊಂಡು ಫ್ಯಾನ್‌ಗೆ ನೇಣುಹಾಕಿಕೊಂಡ ಘಟನೆಯನ್ನು ಕೇಳಿದ್ದೇವೆ. 
 
ಇನ್ನೂ ಕೆಲವು ಮಕ್ಕಳು ಅದರ ಮಾಯದಲ್ಲಿ ಬಿದ್ದು ಅರೆಹುಚ್ಚನಾಗಿರುವ ಹಲವಾರು ಘಟನೆಗಳು ಇವೆ. ಓದು-ಬರಹ ಕಡೆ ಗಮನಹರಿಸದೆ, ಸ್ನೇಹಿತರೊಂದಿಗೆ ಆಟವಾಡದೆ ತಮ್ಮೆಲ್ಲಾ ಸಮಯವನ್ನು ಮೊಬೈಲ್‌ನ ಪಬ್ಜೀ ಗೇಮ್‌ನೊಂದಿಗೆ ಕಾಲ ಕಳೆದು ಇಡೀ ಜೀವನವನ್ನೇ ನಾಶ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಿಳಿಹೇಳಿದವರನ್ನೇ ಕೊಲೆ ಮಾಡುವ ಹಂತಕ್ಕೆ ಹೋಗುತ್ತಿದ್ದಾರೆಂದರೆ ಎಂತಹ ಮಾರಣಾಂತಿಕ ಗೇಮ್ ಆಗಿರಬೇಡಿ ನೀವೇ ಊಹಿಸಿ ನೋಡಿ.
 
ಪೋಷಕರೇ ಮಕ್ಕಳನ್ನು ಇಂತಹ ಗೇಮ್‌ಗಳಿಂದ ರಕ್ಷಿಸಲು ಇರುವ ಮಾರ್ಗವೆಂದರೆ, ದಯವಿಟ್ಟು ಮೊಬೈಲ್, ಇಂಟರ್ನೆಟ್ ನೋಡುವುದನ್ನು ತಪ್ಪಿಸಿ, ಅವರನ್ನು ಪ್ರೀತಿ-ಕಾಳಜಿಯಿಂದ ತಿಳಿ ಹೇಳಿ ಮೈದಾನದಲ್ಲಿ ಆಟವಾಡಲು ಕಳುಹಿಸಿ. ಇಲ್ಲವೆ ಬೇರೆ ಯಾವುದಾದರೂ ಹವ್ಯಾಸಗಳನ್ನು ಬೆಳೆಸಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ