ದಾವೋಸ್ ಭೇಟಿಗೂ ಮುನ್ನವೇ ಸಂಪುಟ ವಿಸ್ತರಣೆ-ಸಿಎಂ ಭರವಸೆ

ಸೋಮವಾರ, 13 ಜನವರಿ 2020 (11:20 IST)
ಬೆಂಗಳೂರು : ದಾವೋಸ್ ಭೇಟಿಗೂ ಮುನ್ನವೇ ಸಂಪುಟ ವಿಸ್ತರಣೆ ಮಾಡುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.


ಬೆಂಗಳೂರಿನ ಡಾಲರ್ಸ್ ಕಾಲೋನಿ ಬಳಿ ಸುದ್ದಿಗಾರರೊಂದಿಗೆ ಮಾತನಾಡದ ಸಿಎಂ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭೇಟಿಗೆ ಇಂದು ಟೈಂ ನೀಡಿದ್ರು. ಆದರೆ ಹಾಲುಮತ ಕಾರ್ಯಕ್ರಮ ಮುಖ್ಯವಾದ ಹಿನ್ನಲೆ ಹೋಗಿಲ್ಲ. ನಾಳೆ ದೆಹಲಿಗೆ ಹೋಗುವುದಕ್ಕೆ ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.

 

ಅಲ್ಲದೇ ನಾಳೆ ಅಮಿತ್ ಶಾ ಭೇಟಿಗೆ ಅವಕಾಶ ಸಿಕ್ಕರೆ ಎಲ್ಲಾ ಕಾರ್ಯಕ್ರಮ ರದ್ದು ಮಾಡಿ ಹೋಗುತ್ತೇನೆ. ಇಲ್ಲಾ ಅಂದ್ರೆ ಜ.17.18ರಂದು ಅವರೇ ಇಲ್ಲಿ ಬರುತ್ತಾರೆ. ಆಗ ಅವರ ಜೊತೆ ಚರ್ಚಿಸಿ ಸಂಪುಟ ವಿಸ್ತರಣೆ ಮಾಡುತ್ತೇನೆ. ನಮ್ಮ ಜತೆ ಬಂದವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ತೇವೆ. ನೂರಕ್ಕೆ ನೂರರಷ್ಟು ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ