ಕೊರೊನಾ ಎಫೆಕ್ಟ್ : ಪ್ರೀತಿಸಿ ಮದುವೆಯಾದವನ ಕೊಲೆ

ಬುಧವಾರ, 1 ಏಪ್ರಿಲ್ 2020 (18:52 IST)

ಯುವತಿಯೊಂದಿಗೆ ಪರಸ್ಪರ ಪ್ರೀತಿಸಿ ಮದುವೆಯಾದವನನ್ನು ಕೊರೊನಾ ಎಫೆಕ್ಟ್ ಬಲಿಪಡೆದುಕೊಂಡಿದೆ.


ಸುಧಾಕರ್ ಎಂಬಾತ 19 ವರ್ಷದ ಯುವತಿಯನ್ನು ಪ್ರೀತಿಸಿ ಗುಟ್ಟಾಗಿ ಮದುವೆಯಾಗಿದ್ದನು. ಮದುವೆಯಾಗಿ ಹತ್ತಾರು ದಿನ ಸಂಸಾರವನ್ನೂ ನಡೆಸಿದ್ದಾನೆ. ಆದರೆ ಇವರಿಬ್ಬರು ಇದ್ದ ಮನೆಯನ್ನು ಯುವತಿಯ ಕುಟುಂಬದವರು ಪತ್ತೆ ಹಚ್ಚಿದ್ದಾರೆ. ಸುಧಾಕರ್ ಗೆ ಬೆದರಿಕೆ ಹಾಕಿ ತಮ್ಮ ಮಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಆ ಬಳಿಕ ಕೆಲಸಕ್ಕೆ ಅಂತ ಸುಧಾಕರ್ ಲಾಕ್ ಡೌನ್ ಇದ್ದ ಕಾರಣ ಊರಿಗೆ ಮರಳಿದ್ದಾನೆ.

ಹೀಗಾಗಿ ಮಗಳನ್ನು ಓಡಿಸಿಕೊಂಡು ಹೋಗಿ ಮದುವೆಯಾಗಿದ್ದ ಕೋಪಕ್ಕೆ ಯುವತಿಯ ತಂದೆ ಮೂರ್ತಿ ಹಾಗೂ ಸಂಬಂಧಿಕನಾದ ಕಥಿರಾವನ್ ಸೇರಿ ಯುವಕ ಸುಧಾಕರ್ ನನ್ನು ಕೊಲೆ ಮಾಡಿದ್ದಾರೆ.

ಯುವಕ ಬೇರೆ ಜಾತಿಯವನಾಗಿದ್ದೂ ಈ ಕೊಲೆಗೆ ಮತ್ತೊಂದು ಕಾರಣ ಎನ್ನಲಾಗಿದೆ. ತಮಿಳುನಾಡಿಲ್ಲಿ ಈ ಘಟನೆ ನಡೆದಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ