ಕೊರೊನಾ ಎಫೆಕ್ಟ್; ರೆಪೋ ದರದಲ್ಲಿ ಇಳಿಕೆ ಮಾಡಿದ ಆರ್ ಬಿಐ

ಶುಕ್ರವಾರ, 27 ಮಾರ್ಚ್ 2020 (10:25 IST)
ನವದೆಹಲಿ : ಕೊರೊನಾ ಭೀತಿ ಹಿನ್ನಲೆ ಇಡೀ ದೇಶವೇ ಲಾಕ್ ಔಟ್ ಮಾಡಿದ ಕಾರಣ ಸಾಲಮರುಪಾವತಿ, ಇಎಂಐ, ಇಸಿಎಸ್, ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಪರಿಹಾರ ಹಲವು ವಿನಾಯತಿ ಕುರಿತು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿ ನಡೆಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಪ್ರಸ್ತುತ ಆರ್ಥಿಕ ಸ್ಥಿತಿಯನ್ನು ಅವಲೋಕಿಸಿದ್ದೇವೆ. ಹೀಗಾಗಿ ನಾವು ಹಲವು ನಿರ್ಣಯಗಳನ್ನು ಕೈಗೊಂಡಿದ್ದೇವೆ. ರೆಪೋ ದರದಲ್ಲಿ ಇಳಿಕೆ ಮಾಡಿದ್ದೇವೆ. ರೆಪೋ ದರ 75 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತ ಮಾಡಿದ್ದೇವೆ. ರೆಪೋ ದರ 5.15 ರಿಂದ 4.4 ಕ್ಕೆ ಇಳಿಕೆ ಮಾಡಿದ್ದೇವೆ. ರಿವರ್ಸ್ ರೆಪೋ ದರ 90 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತ ಮಾಡಿದ್ದೇವೆ ಎಂಬುದಾಗಿ ತಿಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ