ರಾಜ್ಯದಲ್ಲಿ ಹತ್ತು ಹಾಟ್ ಸ್ಪಾಟ್ ಗಳಲ್ಲಿದೆ ಕೊರೊನಾ ವೈರಸ್

ಶುಕ್ರವಾರ, 10 ಏಪ್ರಿಲ್ 2020 (20:03 IST)
ಕೊರೊನಾ ವೈರಸ್ ನ ಹತ್ತು ಹಾಟ್ ಸ್ಪಾಟ್ ಗಳು ರಾಜ್ಯದಲ್ಲಿವೆ ಎಂದು ಸಚಿವರೊಬ್ಬರು ಹೇಳಿದ್ದಾರೆ.

ಹಾಟ್ ಸ್ಪಾಟ್ ಗಳ ಬಗ್ಗೆ  ಕೇಂದ್ರ ಆರೋಗ್ಯ ಸಚಿವರ ಜೊತೆ ಮಾತುಕತೆ ನಡೆದಿದೆ. ಪ್ರಧಾನಿ‌ ನರೇಂದ್ರ ಮೋದಿ  ಅವರು  ಮುಖ್ಯ ಮಂತ್ರಿಗಳ‌ಸಭೆ ಮಾಡಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಕೇದ್ರದ ಆರೋಗ್ಯ ಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ನಲ್ಲಿ  ಮಾತನಾಡಿದ್ದಾರೆ. ಅವರಿಗೆ ರಾಜ್ಯದ ಪರಿಸ್ಥಿತಿ ಬಗ್ಗೆ ತಿಳಿಸಿದ್ದೇನೆ. ಕೊರೋನಾ ಸೋಂಕಿನಿಂದ 207  ಪಾಸಿಟಿವ್ 6 ಡೆತ್ ಆಗಿದೆ. ಮೂವತ್ತು ಜನರು ಗುಣಮುಖರಾಗಿದ್ದಾರೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

10 ಜಿಲ್ಲೆಯನ್ನು ಹಾಟ್ ಸ್ಪಾಟ್ ಜಿಲ್ಲೆ ಎಂದು ಗುರುತಿಸಿದೆ. ಐದು ಸಾವಿರಕ್ಕೂ ಹೆಚ್ಚು ಐಸೋಲೇಷನ್ ವಾರ್ಡ್ ಮಾಡಿದ್ದೇವೆಂದರು.
ಚೈನಾದಿಂದ ಬಂದ ಕಂಟೈನರ್ ನಿಂದ ರೋಗ ಬಂದಿದೆ. ಕಂಟೈನರ್ ನೊಳಗೆ ಇರೋ ದ್ರವ ಪುನಾಗೆ ಕಳುಹಿಸಲಾಗಿದೆ.
ಈ ಬಗ್ಗೆ ವರದಿ ಬಂದಿಲ್ಲ ಈ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡಿದ್ದೇವೆಂದರು. ರಾಜ್ಯದಲ್ಲಿ ಸೀಲ್ ಡೌನ್ ಬಗ್ಗೆ ಇನ್ನೂ ಚರ್ಚೆಯಾಗಿಲ್ಲವೆಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ