ಮೋದಿಯನ್ನು ಹೊಗಳಿದ ಡೊನಾಲ್ಡ್ ಟ್ರಂಪ್ : ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದೇನು?

ಮಂಗಳವಾರ, 25 ಫೆಬ್ರವರಿ 2020 (19:25 IST)
ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿ ಭಾಷಣ ಮಾಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆ ಕುರಿತು ಮಾಜಿ ಸಿಎಂ ವ್ಯಂಗ್ಯವಾಡಿದ್ದಾರೆ.

ಟ್ರಂಪ್ ಹಾಗೂ ಮೋದಿ ಇಬ್ಬರೂ ಪರಸ್ಪರ ಹೊಗಳಿ ಭಾಷಣ ಮಾಡುತ್ತಾರೆ. ಇಬ್ಬರಲ್ಲೂ ಅಂಥ ವ್ಯತ್ಯಾಸ ಇಲ್ಲವೇ ಇಲ್ಲ ಅಂತ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದರಿಂದಾಗಿ ನಮ್ಮ ದೇಶಕ್ಕೆ ಅನುಕೂಲ ಆಗಬೇಕು. ಆದರೆ ಲೂಟಿ ಹೊಡೆಯುವಂಥ ಕೆಲಸ ಆಗಬಾರದು ಅಂತ ಕಿವಿಮಾತು ಹೇಳಿದ್ದಾರೆ.

ಅಮೆರಿಕಾದಲ್ಲಿ ಚುನಾವಣೆಯು ಇನ್ನೆರಡು ತಿಂಗಳಲ್ಲಿ ನಡೆಯಲಿದೆ. ಇಂಥ ಸಂದರ್ಭದಲ್ಲಿ ಭಾರತಕ್ಕೆ ಟ್ರಂಪ್ ಭೇಟಿ ನೀಡುವ ಔಚಿತ್ಯ ಏನಿತ್ತು? ಅಂತ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ