ಬೆಂಗಳೂರಿನಲ್ಲಿ ಸ್ಫೋಟಕ್ಕೆ ಶಂಕಿತ ಉಗ್ರರು ಸಂಚು; ಸಿಸಿಬಿ ನೀಡಿದ ದೂರಿನಲ್ಲಿ ಮಾಹಿತಿ ಬಯಲು

ಮಂಗಳವಾರ, 14 ಜನವರಿ 2020 (11:13 IST)
ಬೆಂಗಳೂರು : ಬೆಂಗಳೂರಿನಲ್ಲಿ  ಸ್ಫೋಟಕ್ಕೆ ಶಂಕಿತ ಉಗ್ರರು ಸಂಚು ರೂಪಿಸಿದ್ದು, ಪೊಲೀಸರ ಎಚ್ಚರಿಕೆಯಿಂದ ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದೆ ಎಂಬುದಾಗಿ ತಿಳಿದುಬಂದಿದೆ.



ತನಿಖೆ ವೇಳೆ ಶಂಕಿತ ಉಗ್ರರ ಮಹಾ ಸಂಚು ತಿಳಿದುಬಂದಿದ್ದು, ಶಂಕಿತ ಉಗ್ರರ ವಿರುದ್ಧ ದಾಖಲಾದ ಎಫ್ ಐಆರ್ ಪ್ರತಿಯಲ್ಲಿ ಮಾಹಿತಿ ಬಯಲಾಗಿದೆ. ಐಸಿಸ್ ಸಂಘಟನೆಗೆ ಸೇರಿದ ಮೆಹಬೂಬ್ ಪಾಷಾ ಈ ಬಗ್ಗೆ ಸ್ಕೆಚ್ ಹಾಕಿದ್ದು, ಸಿಮಿ ಸಂಘಟನೆಯ ಸದಸ್ಯನ ಸಂಪರ್ಕದಲ್ಲಿದ್ದ ಮತ್ತೋರ್ವ ಮನ್ಸೂರ್ ಸ್ಫೋಟಕಕ್ಕೆ ಬೇಕಾದ  ಶಸ್ತ್ರಾಸ್ತ್ರ ಮತ್ತು ಸ್ಪೋಟಕ ಗಳನ್ನು ಸಂಗ್ರಹ ಮಾಡುತ್ತಿದ್ದರು ಎನ್ನಲಾಗಿದೆ.


2019ರ ಜುಲೈನಿಂದ ನಗರದಲ್ಲಿ ಶಂಕಿತ ಉಗ್ರರ ಸಂಚು ನಡೆದಿದ್ದು, ಸದ್ಯ ಸಿಸಿಬಿ ಇನ್ಸ್ ಪೆಕ್ಟರ್ ದೂರಿನ ಮೇರೆಗೆ ಈ ಬಗ್ಗೆ ಎಸ್.ಜಿ.ಪಾಳ್ಯ ಪೊಲೀಸ್ ಠಾಣೆಯಲ್ಲಿ 17 ಜನರ ಮೇಲೆ ಎಫ್ ಐಆರ್ ದಾಖಲಾಗಿದೆ.  ಸಿಸಿಬಿ ನೀಡಿದ ದೂರಿನಲ್ಲಿ ಸ್ಪೋಟಕ ಮಾಹಿತಿ ಉಲ್ಲೇಖ ವಾಗಿದ್ದು, ಎಫ್ ಐಆರ್ ನಲ್ಲಿ ಶಂಕಿತರ ಕಾರ್ಯ ಚಟುವಟಿಕೆಯ ಕಂಪ್ಲೀಟ್ ಮಾಹಿತಿ ಇದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ