ಗ್ಯಾಸ್​ ಗೀಸರ್​ ಅನಿಲ ಸೋರಿಕೆ.. ಯುವತಿ ಸಾವು

ಸೋಮವಾರ, 25 ಡಿಸೆಂಬರ್ 2023 (15:44 IST)
ಬೆಂಗಳೂರಿನಲ್ಲಿ ಗ್ಯಾಸ್​​ ಗೀಸರ್​ ಅನಿಲ ಸೋರಿಕೆಯಿಂದಾಗಿ ಯುವತಿಯೋರ್ವಳು ಸಾವನಪ್ಪಿದ್ದಾಳೆ..ಬೆಂಗಳೂರಿನ ಕಾಮಾಕ್ಷಿಪಾಳ್ಯ ಮೀನಾಕ್ಷಿ ನಗರದಲ್ಲಿ ಘಟನೆ ನಡೆದಿದೆ. ರಾಜೇಶ್ವರಿ ಮೃತ ಯುವತಿ.. ಈಕೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ಲು.

ಅಣ್ಣನ ವಿವಾಹ ಹಿನ್ನೆಲೆ ರಜೆ ಹಾಕಿದ್ದ ಯುವತಿ, ಸ್ನಾನ ಮಾಡಲು ಹೋಗಿದ್ದ ವೇಳೆ ಅವಘಡ ಸಂಭವಿಸಿದೆ.. ಗ್ಯಾಸ್​ಗೀಸರ್​ನಿಂದ ವಿಷ ಅನಿಲ ಸೋರಿಕೆಯಾದ ಹಿನ್ನೆಲೆ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟೊತ್ತಿಗಾಗಲೇ ಯುವತಿ ಮೃತಪಟ್ಟಿದ್ಲು.. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ