ತೆರಿಗೆದಾರರಿಗೆ ಗುಡ್ ನ್ಯೂಸ್ : 5 ಲಕ್ಷಕ್ಕೆ ತೆರಿಗೆ ಇಲ್ಲ

ಶನಿವಾರ, 1 ಫೆಬ್ರವರಿ 2020 (14:26 IST)
ಕೇಂದ್ರದ ವಿತ್ತ ಸಚಿವೆ ತೆರಿಗೆದಾರರಿಗೆ ಭರ್ಜರಿ ಕೊಡುಗೆ ನೀಡುವಲ್ಲಿ ಮನಸ್ಸು ಮಾಡಿದ್ದಾರೆ. ಇನ್ಮುಂದೆ 5 ಲಕ್ಷದವರೆಗೆ ಯಾವುದೇ ತೆರಿಗೆ ಕಟ್ಟಬೇಕಿಲ್ಲ.

ಆದಾಯ ತೆರಿಗೆಯಲ್ಲಿಯೂ ಕೇಂದ್ರ ಸಚಿವೆ ಕಡಿತ ಮಾಡಿದ್ದು, ತೆರಿಗೆದಾರರಿಗೆ 5 ಲಕ್ಷದವರೆಗೆ ವಿನಾಯಿತಿ ಕೊಟ್ಟಿದ್ದಾರೆ.

 5 ರಿಂದ 7.5 ಲಕ್ಷಕ್ಕೆ ಶೇ. 10 ತೆರಿಗೆ, 10 ಲಕ್ಷದವರೆಗೆ ಶೇ. 15, 12.5 ಲಕ್ಷದವರೆಗೆ ಶೇ. 20 ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ.

ತೆರಿಗೆ ವಿನಾಯಿತಿ ಮಿತಿ ಹೆಚ್ಚಾಗಿರೋದ್ರಿಂದ ಸಹಜವಾಗಿಯೇ ಮಧ್ಯಮ ಹಾಗೂ ಬಡ ವರ್ಗದ  ಜನರಿಗೆ ಅನುಕೂಲ ಹೆಚ್ಚಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ