ಡಿಕೆಶಿ, ಸಿದ್ದರಾಮಯ್ಯ ಬೇಕಾದಾಗ ನಮ್ಮನ್ನು ಬಳಸಿಕೊಂಡ್ರು: ಹೀಗಂದಿದ್ಯಾಕೆ ಕರವೇ ನಾಯಕ ನಾರಾಯಣ ಗೌಡ?

ಶನಿವಾರ, 30 ಡಿಸೆಂಬರ್ 2023 (09:37 IST)
Photo Courtesy: Twitter
ಬೆಂಗಳೂರು: ಬೆಂಗಳೂರಿನಲ್ಲಿ ಕನ್ನಡ ನಾಮಫಲಕಗಳ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡರ ನೇತೃತ್ವದಲ್ಲಿ ಹೋರಾಟ ಕಾವೇರುತ್ತಿದೆ.

ಕನ್ನಡ ಹೋರಾಟಗಾರರು ವಿವಿಧ ಮಾಲ್ ಗಳು, ಅಂಗಡಿಗಳಿಗೆ ದಾಳಿ ನಡೆಸಿ ಕನ್ನಡ ಬೋರ್ಡ್ ಹಾಕುವಂತೆ ಒತ್ತಾಯ ಹೇರಿದ್ದಾರೆ. ಸರ್ಕಾರ ಕೂಡಾ ಫೆಬ್ರವರಿ ಅಂತ್ಯದೊಳಗೆ ಎಲ್ಲಾ ಅಂಗಡಿಗಳು, ಮಾಲ್ ಗಳಲ್ಲಿ ಕನ್ನಡ ಫಲಕ ಕಡ್ಡಾಯ ಆದೇಶ ಹೊರಡಿಸಿದೆ.

ಈ ನಡುವೆ ಪ್ರತಿಭಟನಾ ನಿರತ ಕರವೇ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿ ನಾರಾಯಣ ಗೌಡ ಸೇರಿದಂತೆ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಬಂಧನದ ವೇಳೆ ನಾರಾಯಣ ಗೌಡರು ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಕೆಶಿ, ಸಿದ್ದರಾಮಯ್ಯನವರಿಗೆ ನಾಚಿಕೆಯಾಗಬೇಕು. ಬೇಕಾದಾಗ ನಮ್ಮನ್ನು ಬಳಸಿಕೊಂಡರು. ಈಗ ನಮ್ಮ ಮೇಲೇ ಲಾಠಿ ಪ್ರಹಾರ ಮಾಡುತ್ತೀರಾ? ನಿಮಗೆಲ್ಲಾ ಮುಂದಿನ ಲೋಕಸಭೆ ಚುನಾವಣೆ ವೇಳೆ ತಕ್ಕ ಉತ್ತರ ಕೊಡುತ್ತೇವೆ’ ಎಂದು ನಾರಾಯಣ ಗೌಡರು ನೀಡಿದ ಹೇಳಿಕೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.

ಇದರ ಬೆನ್ನಲ್ಲೇ ಬಿಜೆಪಿ ಬೆಂಬಲಿಗರು ಪ್ರತಿಕ್ರಿಯಿಸಿದ್ದು, ಹಾಗಿದ್ದರೆ ನಾರಾಯಣ ಗೌಡರು ಮತ್ತು ಕರವೇ ಕಾರ್ಯಕರ್ತರನ್ನು ಡಿಕೆಶಿ ಮತ್ತು ಸಿದ್ದರಾಮಯ್ಯನವರು ಈ ಮೊದಲು ಯಾವ ಕೆಲಸಕ್ಕೆ ಬಳಸಿಕೊಂಡರು? ಬಿಜೆಪಿ ಸರ್ಕಾರವಿದ್ದಾಗ ನಂದಿನಿ ಹಾಲಿನ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕರವೇ ಕೈ ಜೋಡಿಸಿತ್ತು. ಆಗ ಕಾಂಗ್ರೆಸ್ ಕರವೇ ಕಾರ್ಯಕರ್ತರನ್ನು ಛೂ ಬಿಟ್ಟು ಈ ವಿಚಾರವನ್ನು ದೊಡ್ಡದು ಮಾಡಿತೇ ಎಂದು ಪ್ರಶ್ನಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ