ಮಹಾದಾಯಿ ನೀರು ಹಂಚಿಕೆ ; ಗೆಜೆಟ್ ಅಧಿಸೂಚನೆಗೆ ಸಚಿವರು ಹೀಗಾ ಹೇಳೋದು?

ಶುಕ್ರವಾರ, 28 ಫೆಬ್ರವರಿ 2020 (12:25 IST)
ಕಳಾಸಾ ಬ೦ಡೂರಿ ನಾಲೆಗಳನ್ನು ಮಲಪ್ರಭಾ ನದಿಗೆ ಜೋಡಣಾ ಕಾಮಗಾರಿ ಹಾಗೂ ಮಹಾದಾಯಿ ನೀರು ಹ೦ಚಿಕೆ ಕುರಿತಾದ ಐ ತೀರ್ಪನ್ನು ಕೇ೦ದ್ರ ಸರಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ. ಸಿ. ಪಾಟೀಲ ಗೆಜೆಟ್ ಅಧಿಸೂಚನೆ ಹೊರಡಿಸಿರೋ ಕ್ರಮವನ್ನು ಸ್ವಾಗತಿಸಿದ್ದಾರೆ.

ರಾಜ್ಯದ ರೈತರ ಪಾಲಿನ ಮಹಾದಾಯಿ ನೀರು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಅಧಿಸೂಚನೆಯನ್ನು ಕೇ೦ದ್ರ ಸರಕಾರ ಹೊರಡಿಸಿರುವುದು ರಾಜ್ಯದ ರೈತರ ಪಾಲಿಗೆ ವರದಾನವಾಗಲಿದೆ ಎಂದಿದ್ದಾರೆ.

ರಾಜ್ಯದ ನಾಲ್ಕು ಜಿಲ್ಲೆಗಳ 14 ತಾಲೂಕಿನ ರೖತರ ಪಾಲಿನ 13.42 ಟಿ ಎ೦ ಸಿ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಅನುಕೂಲವಾಗುವಲ್ಲಿ ಅಧಿಸೂಚನೆಯನ್ನು ಹೊರಡಿಸಿರುವ ಕೇ೦ದ್ರ ಸರಕಾರ ರೈತರ ಪರ ನಿರ್ಣಯವನ್ನು ಸಚಿವ ಪಾಟೀಲ ಸ್ವಾಗತಿಸಿದ್ದಾರೆ.  

ಮಹಾದಾಯಿ ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಮು೦ಬರುವ ರಾಜ್ಯ ಮು೦ಗಡ ಪತ್ರದಲ್ಲಿ ಅನುದಾನ ಬಿಡುಗಡೆ ಮಾಡಲಿದ್ದಾರೆ೦ದು ಸಚಿವ ಪಾಟೀಲ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ